Bollywood

ಫನಾ ಚಿತ್ರಕ್ಕೆ 20 ವರ್ಷ : ಮಧುರ ನೆನಪುಗಳನ್ನು ಹಂಚಿಕೊಂಡ ಕಾಜೋಲ್

ಬಾಲಿವುಡ್‍ನ ಸೂಪರ್ ಹಿಟ್ ಸಿನಿಮಾ `ಫನಾ’ 20 ವರ್ಷ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಾಜೋಲ್ ಅಂದಿನ ಮಧುರ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಂ ಪುಟದಲ್ಲಿ ಅಮಿರ್ ಖಾನ್ ನಟನೆಯ ಚಿತ್ರದ ಫೋಟೋಗಳನ್ನು ಹಂಚಿಕೊಂಡಿರುವ ಕಾಜೋಲ್, ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ `ಮೇರೆ ಹಾಥ್ ಮೇ ತೇರಾ ಹಾಥ್ ಹೋ’ ಎಂಬ ಐಕಾನಿಕ್ ಟ್ರ್ಯಾಕ್ ಅನ್ನು ಕೂಡಾ ಇವರು ಬಳಕೆ ಮಾಡಿದ್ದಾರೆ.


2006ರಲ್ಲಿ ‘ಫನಾ’ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಆಮಿರ್ ಖಾನ್ ಮತ್ತು ಕಾಜೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ರಿಷಿ ಕಪೂರ್, ಕಿರಣ್ ಖೇರ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕುನಾಲ್ ಕೊಹ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button