News Roundup

ನಾಥು ಲಾ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿಯಾಚೆಗಿನ ವ್ಯಾಪಾರ 6 ವರ್ಷಗಳ ಬಳಿಕ ಪುನರಾರಂಭ

ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿಯಾಚೆಗಿನ ವ್ಯಾಪಾರವು ಆರು ವರ್ಷಗಳ ಬಳಿಕ ಪುನರಾರಂಭಗೊಂಡಿದೆ. ಇಂದು (ಶನಿವಾರ) ಬೆಳಗ್ಗೆ ಈ ವ್ಯಾಪಾರ ಆರಂಭಗೊಂಡಿದ್ದು, ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಸಕಾರಾತ್ಮಕ ಸಂಕೇತವನ್ನು ಸೂಚಿಸುತ್ತದೆ.

1962ರ ಭಾರತ-ಚೀನಾ ಸಂಘರ್ಷದ ನಂತರ ಈ ಗಡಿ ವ್ಯಾಪಾರವನ್ನು ಮುಚ್ಚಲಾಗಿತ್ತು. ಇದನ್ನು 2006ರಲ್ಲಿ ಔಪಚಾರಿಕವಾಗಿ ಪುನರಾರಂಭಗೊಳಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ 2020 ರಲ್ಲಿ ಈ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದು ಇತ್ತೀಚಿನ ತನಕ ಮುಂದುವರಿದಿತ್ತು. ಇದೀಗ ಗಡಿಯಾಚೆಗಿನ ವ್ಯಾಪಾರ ಮುಂದುವರಿದಿದ್ದು, ಗಡಿ ವ್ಯಾಪಾರವು ಸೋಮವಾರದಿಂದ ಗುರುವಾರದವರೆಗೆ ಕಾರ್ಯನಿರ್ವಹಿಸುತ್ತದೆ. ಭಾರತೀಯ ಕಾಲಮಾನ ಬೆಳಿಗ್ಗೆ 7:30 ಕ್ಕೆ ಗೇಟ್ ತೆರೆಯುತ್ತದೆ. ಪ್ರತಿಯೊಬ್ಬ ನೋಂದಾಯಿತ ವ್ಯಾಪಾರಿಗೆ ದಿನಕ್ಕೆ 2 ಲಕ್ಷ ರೂಪಾಯಿಗಳವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗುತ್ತದೆ.

Show More

Related Articles

Leave a Reply

Your email address will not be published. Required fields are marked *

Back to top button