Kollywood

ಸೂಪರ್ ಸ್ಟಾರ್ ರಜನಿಕಾಂತ್ ಅವರ `ಧರ್ಮನ್’ ಟೀಮ್ ಸೇರಿದ ನಯನತಾರಾ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂಬರುವ `ಧರ್ಮನ್’ ಚಿತ್ರದ ತಂಡವನ್ನು ನಟಿ ನಯನತಾರಾ ಸೇರಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರತಂಡ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ 2021ರಲ್ಲಿ ಬಿಡುಗಡೆಯಾದ ‘ಅಣ್ಣಾತ್ತೆ’ ಚಿತ್ರದ ಬಳಿಕ ಐದು ವರ್ಷಗಳ ಬಳಿಕ ರಜನಿಕಾಂತ್ ಹಾಗೂ ನಯನತಾರಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಈ  ಪೋಸ್ಟರ್ ನಲ್ಲಿ ರಜನಿಕಾಂತ್ ಮತ್ತು ನಯನತಾರಾ ಪರಸ್ಪರ ಮುಖಾಮುಖಿ ನಿಂತಿರುವ ದೃಶ್ಯವಿದೆ. `ದಿ ಔರಾ ಈಸ್ ಡಬಲ್’ ಎಂಬ ಕ್ಯಾಪ್ಶನ್ ನೊಂದಿಗೆ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.


ಧರ್ಮನ್ ಚಿತ್ರದಲ್ಲಿ ನಯನತಾರಾ ಜೊತೆಗೆ ಸಿಮ್ರನ್ ಮತ್ತು ರಾಶಿ ಖನ್ನಾ ಕೂಡ ನಟಿಸುತ್ತಿದ್ದಾರೆ. ಅಶ್ವತ್ ಮಾರಿಮುತ್ತು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಕಮಲ್ ಹಾಸನ್ ನೇತೃತ್ವದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು ‘ಧರ್ಮನ್’ ಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರವು 2027ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Show More

Related Articles

Leave a Reply

Your email address will not be published. Required fields are marked *

Back to top button