K Rajan : ತಮಿಳಿನ ಹಿರಿಯ ನಿರ್ಮಾಪಕ ಆತ್ಮಹತ್ಯೆಗೆ ಶರಣು
ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಇವರ ನಿಧನದ ಸುದ್ದಿ ಸಿನಿರಂಗಕ್ಕೆ ಆಘಾತ ತಂದಿದೆ. ಅಡ್ಯಾರ್ ನದಿಗೆ ಹಾರಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ತನ್ನ ನಿರ್ಭಿತ ಮಾತು, ಹೇಳಿಕೆ ಮತ್ತು ನಿರ್ಮಾಪಕ ಕಷ್ಟಗಳಿಗೆ ಧ್ವನಿಯಾಗುತ್ತಿದ್ದ ಗುಣದ ಮೂಲಕ ಕೆ ರಾಜನ್ ಸದಾ ಸುದ್ದಿಯಲ್ಲಿರುತ್ತಿದ್ದರು. ಲಭ್ಯ ಮಾಹಿತಿ ಪ್ರಕಾರ ಇವರು ಚೆನ್ನೈನ ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿದ್ದಾರೆ. ನಂತರ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಶವವನ್ನು ಹೊರತೆಗೆದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Terrible news. Deeply shocked to hear about the demise of our beloved member of film fraternity, producer K.Rajan Sir. He passing away by suicide is extremely saddening. Very respectful person and a man who never hesitated to call a spade a spade. Very very upsetting.
May his… pic.twitter.com/75GXFHu9uM— KhushbuSundar (@khushsundar) May 17, 2026
1980ರ ದಶಕದಿಂದಲೂ ಕೆ. ರಾಜನ್ ತಮಿಳು ಸಿನೆಮಾದೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದರು. 1983 ರಲ್ಲಿ ಸುರೇಶ್ ಅಭಿನಯದ ಬ್ರಹ್ಮಚಾರಿಗಲ್ ಚಿತ್ರದ ಮೂಲಕ ಅವರು ನಿರ್ಮಾಪಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಬಳಿಕ ಇವರು ತಮ್ಮ ಬ್ಯಾನರ್ ಗಣೇಶ್ ಸಿನಿ ಆಟ್ರ್ಸ್ ಮೂಲಕ, ಅವರು ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದರು. ಅಬ್ಬಾಸ್ ಮತ್ತು ಕುನಾಲ್ ನಟಿಸಿದ ಉನಾರ್ಚಿಗಲ್ ಸೇರಿದಂತೆ ಚಲನಚಿತ್ರಗಳನ್ನು ನಿರ್ದೇಶಿಸಿದರು. ಚಲನಚಿತ್ರ ನಿರ್ಮಾಣದ ಜೊತೆಗೆ, ಅವರು ಚಲನಚಿತ್ರ ವ್ಯಾಪಾರ ವಲಯದಲ್ಲೂ ಪ್ರಭಾವಶಾಲಿ ಪಾತ್ರವನ್ನು ವಹಿಸಿದ್ದಾರೆ. ಇದಲ್ಲದೆ, ಕೆಲವೊಂದು ಚಿತ್ರಗಳಲ್ಲಿ ಇವರು ನಟಿಸಿಯೂ ಗಮನ ಸೆಳೆದಿದ್ದಾರೆ.



