Kollywood

ರಿಷಭ್ ಶೆಟ್ಟಿ ಅವರನ್ನು ಭೇಟಿಯಾದ ತಮಿಳು ಯುವ ನಟ ಕೆನ್ ಕರುಣಾಸ್

ತಮಿಳಿನ ಯುವ ನಟ, ನಿರ್ದೇಶಕ ಕೆನ್ ಕರುಣಾಸ್ ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ. ಕೆನ್ ಕರುಣಾಸ್ ಇತ್ತೀಚೆಗೆ ಯೂತ್ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಈ ಚಿತ್ರದಲ್ಲಿ ಇವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೂತ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ.

ಇದೀಗ ರಿಷಭ್ ಶೆಟ್ಟಿ ಅವರೊಂದಿಗೆ ಇರುವ ಫೋಟೋವನ್ನು ಕೆನ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಒಂದು ವಾರದ ಹಿಂದೆ ರಿಷಭ್ ಶೆಟ್ಟಿ ಅವರು ಯೂತ್ ಚಿತ್ರವನ್ನು ಮೆಚ್ಚಿ ತಮ್ಮ ಟ್ವಿಟರ್‌ನಲ್ಲಿ ಸಂದೇಶ ಹಾಕಿದ್ದರು.


ಈ ಸಿನಿಮಾ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕೆನ್ ಅವರ ತಂದೆ ಕರುಣಾಸ್ ತಮಿಳಿನ ಖ್ಯಾತ ಕಲಾವಿದರಲ್ಲಿ ಒಬ್ಬರು. ಇವರ ತಾಯಿ ಗ್ರೇಸ್ ಕರುಣಾಸ್ ಹಿನ್ನೆಲೆ ಗಾಯಕಿ ಹಾಗೂ ನಟಿ ಕೂಡಾ ಹೌದು.

Show More

Related Articles

Leave a Reply

Your email address will not be published. Required fields are marked *

Back to top button