Bollywood

ಧುರಂಧರ್ 2 `ಪ್ರೊಪಗಾಂಡ’ ಎನ್ನುವವರಿಗೆ ನಾಚಿಕೆಯಾಗಬೇಕು ; ನಟ ಅನುಪಮ್ ಖೇರ್ ಕಿಡಿ; ಹೀಗಿತ್ತು ರಣವೀರ್ ಪ್ರತಿಕ್ರಿಯೆ

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ `ಧುರಂಧರ್ 2′ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಹಾಗೂ ನಟ ರಣವೀರ್ ಸಿಂಗ್ ಬಗ್ಗೆ ಅನುಪಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಸಿನಿಮಾವನ್ನು `ಪ್ರೊಪಗಾಂಡ’ ಎಂದು ಲೇಬಲ್ ಮಾಡುವವರ ಬಗ್ಗೆಯೂ ಕಿಡಿಕಾರಿದ್ದಾರೆ. ಇಂಥವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಇನ್‍ಸ್ಟ್ರಾಗ್ರಾಂನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಅನುಪಮ್ ಖೇರ್, ಚಿತ್ರವನ್ನು ವೀಕ್ಷಿಸಿದ ನಂತರ ಆದಿತ್ಯ ಧರ್ ಅವರನ್ನು ಅಭಿನಂದಿಸಲು ವೈಯಕ್ತಿಕವಾಗಿ ಕರೆ ಮಾಡಿದ್ದೇನೆ ಎಂದೂ ತಿಳಿಸಿದ್ದಾರೆ. `ಧುರಂಧರ್ 2 ಅತ್ಯುತ್ತಮ! ಆದಿತ್ಯ ಧರ್ ಒಬ್ಬ ರಾಕ್‍ಸ್ಟಾರ್! ಇದು ಕೇವಲ ಚಿತ್ರವಲ್ಲ, ಅದೊಂದು ಅನುಭವ, ಒಂದು ಭಾವನೆ. ಸದ್ದಿಲ್ಲದೆ ನಿಮ್ಮ ಹೃದಯವನ್ನು ಪ್ರವೇಶಿಸಿ ನಂತರ ಬಿಡಲು ನಿರಾಕರಿಸುವ ಪ್ರಯಾಣ’ ಎಂದು ಅನುಪಮ್ ಖೇರ್ ಹೇಳಿದ್ದಾರೆ.

 

View this post on Instagram

 

A post shared by Anupam Kher (@anupampkher)


ಅನುಪಮ್ ಅವರ ಮೆಚ್ಚುಗೆಗೆ ರಣವೀರ್ ಸಿಂಗ್ ಧನ್ಯವಾದ ಅರ್ಪಿಸಿದ್ದಾರೆ. `ಇದನ್ನು ನೋಡಿದ ನಂತರ ಮಾತುಗಳು ಸಾಲುವುದಿಲ್ಲ ಸರ್. ನಾನು ನಿಮ್ಮ ಕಲಾತ್ಮಕತೆಯಿಂದ ಪ್ರೇರಿತನಾಗಿ ಬೆಳೆದಿದ್ದೇನೆ. ನಿಮ್ಮಿಂದ ಇದನ್ನು ಕೇಳುವುದು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಿಮಗೆ ನನ್ನ ಆಳವಾದ ಗೌರವಗಳು ಮತ್ತು ನಮಸ್ಕಾರಗಳು ಸರ್’ ಎಂದು ರಣವೀರ್ ಕಮೆಂಟ್ ಮಾಡಿದ್ದಾರೆ.

Image Courtesy : www.instagram.com/anupampkher/

ಮಾರ್ಚ್ 19ರಂದು ಬಿಡುಗಡೆಯಾಗಿದ್ದ ಧುರಂಧರ್ 2 ಬಾಕ್ಸ್ ಆಫೀಸ್‍ನಲ್ಲಿ ಕೋಟಿ ಕೋಟಿ ಚಾಚಿಕೊಂಡು ಮುನ್ನುಗ್ಗುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button