Bollywood

ಬಾಲ್ಯದಲ್ಲಿ ಹೀಗಿದ್ದರು ಪ್ರಿಯಾಂಕಾ ಚೋಪ್ರಾ : ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ಬಾಲಿವುಡ್ ನಟಿ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಬಾಲ್ಯದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಿಸ್ ವರ್ಲ್ಡ್ ಕಿರೀಟ ಅಲಂಕರಿಸಿರುವ ಫೋಟೋ ಹಾಗೂ ತನ್ನ ಬಾಲ್ಯದ ಫೋಟೋವನ್ನು ಜೊತೆಯಾಗಿಸಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಪೋಸ್ಟ್‌ನಲ್ಲಿ ಹಲವು ಫೋಟೋಗಳಿದ್ದು, ಈ ಮೂಲಕ ಇವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.


“ನಾನು 18ನೇ ವಯಸ್ಸಿನಲ್ಲಿ ಕಿರೀಟವನ್ನು ಧರಿಸಿದಾಗ ನನ್ನ ಜೀವನ ಬದಲಾಯಿತು!” ಎಂದು ಪ್ರಿಯಾಂಕಾ ವಿಶ್ವ ಸುಂದರಿ ದಿನಗಳ ಚಿತ್ರದೊಂದಿಗೆ ಬರೆದಿದ್ದಾರೆ.

ಸದ್ಯ ಪ್ರಿಯಾಂಕಾ ಎಸ್‌ಎಸ್ ರಾಜಮೌಳಿ ನಿರ್ದೇಶನದ ವಾರಣಾಸಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು 2027ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅವರು ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ನಟಿಸಲಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button