Janhvi Kapoor : ಪ್ಯಾಟ್ ಕಮ್ಮಿನ್ಸ್ ಜೊತೆ ಜಾನ್ವಿ ಕಪೂರ್ ಕ್ರಿಕೆಟ್ : ಪ್ರೇಕ್ಷಕನ ಕ್ಷಮೆ ಕೇಳಿದ ನಟಿ
ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಜೊತೆ ಕ್ರಿಕೆಟ್ ಆಡಿದ್ದರು. ಈ ತಮಾಷೆಯ ಕ್ರಿಕೆಟ್ ವೇಳೆ ಜಾನ್ವಿ ಹೊಡೆದ ಬಾಲ್ ಅಲ್ಲೇ ಇದ್ದ ಪ್ರೇಕ್ಷಕರ ಫೋನ್‍ಗೆ ಬಡಿದಿತ್ತು.
ಇದೀಗ ಈ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಜಾನ್ವಿ ಆ ಪ್ರೇಕ್ಷಕನ ಕ್ಷಮೆ ಕೇಳಿದ್ದಾರೆ.
View this post on Instagram
Pat Cummins bowling to Janhvi Kapoor during an event 😂
He would’ve never imagined that after dominating batters for years, one day he’d be bowling to a Bollywood actress at an event 😭 pic.twitter.com/NTiMWGqnYH
— Rohan💫 (@rohann__45) May 20, 2026
ಹೈದರಾಬಾದಿನ ಡಿಎಲ್‍ಎಫ್ ಮಾಲ್‍ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಜಾನ್ವಿ ಜೊತೆ ಸ್ನೇಹಪರ ಕ್ರಿಕೆಟ್ ಆಟ ಆಡಿದ್ದರು. ಪ್ಯಾಟ್ ಕಮ್ಮಿನ್ಸ್ ಎಸೆದ ಬಾಲ್ ಅನ್ನು ಜಾನ್ವಿ ಬಹಳ ಆತ್ಮವಿಶ್ವಾಸದಿಂದಲೇ ಹೊಡೆದಿದ್ದರು. ಈ ಹೊಡೆತದಿಂದ ಬಾಲ್ ಪ್ರೇಕ್ಷಕರ ಕಡೆಗೆ ಚಿಮ್ಮಿತ್ತು.
ಜಾನ್ವಿ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ 2026ರ ಜೂನ್ 4 ರಂದು ತೆರೆಗೆ ಬರಲಿದೆ.



