ಧುರಂಧರ್ 2 ಚಿತ್ರದಲ್ಲಿ ನಟಿಸುವ ಅವಕಾಶ ತಿರಸ್ಕರಿಸಿದ್ದ ಅನಿಲ್ ಕಪೂರ್ : ಅವರೇ ನೀಡಿದ್ದಾರೆ ಸ್ಪಷ್ಟನೆ
ಬಾಲಿವುಡ್‍ನ ಬಹುನಿರೀಕ್ಷಿತ `ಧುರಂಧರ್ ದಿ ರಿವೇಂಜ್’ ತೆರೆಗೆ ಬರಲು ಸಿದ್ಧವಾಗಿದೆ. ಈ ನಡುವೆ ಈ ಚಿತ್ರದಲ್ಲಿ ತಾನೇಕೆ ನಟಿಸಲಿಲ್ಲ ಎಂಬುದರ ಬಗ್ಗೆ ಹಿರಿಯ ನಟ ಅನಿಲ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ನಟಿಸಲು ಬಂದಿದ್ದ ಅವಕಾಶವನ್ನು ಅನಿಲ್ ಕಪೂರ್ ನಯವಾಗಿ ತಿರಸ್ಕರಿಸಿದ್ದರು.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅನಿಲ್ ಕಪೂರ್, `ಧುರಂಧರ್ ಚಿತ್ರದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಲು ಕೇಳಿಕೊಂಡಿದ್ದರು. ಆದರೆ ನಾನು ಅದಾಗಲೇ ಬೇರೆ ಚಿತ್ರವನ್ನು ಒಪ್ಪಿಕೊಂಡಿದ್ದರಿಂದ ಈ ಸಿನಿಮಾದಲ್ಲಿ ಅಭಿನಯಿಸಿಲ್ಲ. ನಾನು ಬದ್ಧತೆ ಹಾಗೂ ವೃತ್ತಿಪರತೆಯ ಕಾರಣದಿಂದ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದಿದ್ದೇನೆ. ಕೇವಲ ಪ್ರತಿಭೆ ಮಾತ್ರ ನೀವೇನಾಗಬೇಕೆಂದು ಬಯಸಿದ್ದೀರೋ ಅದನ್ನು ರೂಪಿಸಲು ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ನಟಿಸಲು ನಾನು ಒಪ್ಪಿದ್ದರೆ ಈಗಾಗಲೇ ನಾನು ಒಪ್ಪಿಕೊಂಡಿದ್ದ ಸಿನಿಮಾಕ್ಕೆ ತೊಂದರೆಯಾಗುತ್ತಿತ್ತು’ ಎಂದು ಇವರು ಹೇಳಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಆದಿತ್ಯ ಧರ್ ಸಿನಿಮಾದಲ್ಲಿ ನಟಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
🚨 BIG REVEAL 🚨#AnilKapoor confirms he rejected a cameo in #DhurandharTheRevenge 🔔
Director @AdityaDharFilms had approached him for a special appearance in Ranveer Singh’s much-hyped sequel #Dhurandhar2.
But Anil Kapoor had to politely decline due to prior commitments,… pic.twitter.com/FDYG7Bt37O
— Freak4Flims (@Freak4Flims) March 14, 2026
ರಣವೀರ್ ಸಿಂಗ್ ಅಭಿನಯದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಮಾರ್ಚ್ 19ರಂದು ತೆರೆ ಕಾಣುತ್ತಿದೆ.



