AutomobileBollywood

ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಈಗ ಬೆಂಟ್ಲಿ ಮೋಟಾರ್ಸ್‍ನ ಜಾಗತಿಕ ಬ್ರ್ಯಾಂಡ್ ಅಂಬಾಸೀಡರ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಕಾರು ತಯಾರಿಕಾ ಕಂಪನಿ ಬೆಂಟ್ಲಿ ಮೋಟಾರ್ಸ್‍ನ ಜಾಗತಿಕ ಬ್ರ್ಯಾಂಡ್ ಅಂಬಾಸೀಡರ್ ಆಗಿ ನೇಮಕವಾಗಿದ್ದಾರೆ. ಬೆಂಟ್ಲಿ ಮೋಟಾರ್ಸ್ ಯುನೈಟೆಡ್ ಕಿಂಗ್‌ಡಮ್ ಮೂಲದ ಐಷಾರಾಮಿ ಕಾರುಗಳ ತಯಾರಕ ಕಂಪನಿಯಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನೇಮಕಗೊಂಡ ಸಹ-ಸೃಜನಶೀಲ ನಿರ್ದೇಶಕರಾದ ಗ್ರೆಗ್ ವಿಲಿಯಮ್ಸ್ ಮತ್ತು ಮೈ ಇಕುಜಾವಾ ಸೇರಿದಂತೆ ಬೆಂಟ್ಲಿಯ ಬೆಳೆಯುತ್ತಿರುವ ಜಾಗತಿಕ ರಾಯಭಾರಿಗಳ ಪಟ್ಟಿಗೆ ಈಗ ಪ್ರಿಯಾಂಕಾ ಚೋಪ್ರಾ ಅವರು ಕೂಡಾ ಸೇರುತ್ತಾರೆ.

 

View this post on Instagram

 

A post shared by Bentley Motors (@bentleymotors)


ಈ ಬಗ್ಗೆ ಬೆಂಟ್ಲಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದೆ. `ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರನ್ನು ನಮ್ಮ ಹೊಸ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ಘೋಷಿಸಲು ಬೆಂಟ್ಲಿ ಸಂತಸಪಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ನಟಿ, ನಿರ್ಮಾಪಕಿ ಮತ್ತು ಉದ್ಯಮಿ ಪ್ರಿಯಾಂಕಾ, ಬೆಂಟ್ಲಿ ಮನೋಭಾವ ಮತ್ತು ಮನಸ್ಥಿತಿಯ ಸಾಕಾರ ರೂಪ’ ಎಂದು ಈ ಪೋಸ್ಟ್ನಲ್ಲಿ ಬರೆದುಕೊಳ್ಳಲಾಗಿದೆ.

ಪ್ರಿಯಾಂಕಾ ಚೋಪ್ರಾ ಅವರು ಕೂಡಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button