ಗೋಲ್ಡನ್ ಟೆಂಪಲ್‍ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ಸುಂದರ ಪ್ರಿಯಾಂಕಾ ಚೋಪ್ರಾ ಅಮೃತಸರದ ಗೋಲ್ಡನ್ ಟೆಂಪಲ್‍ನಲ್ಲಿ ಪಾತ್ರೆಗಳನ್ನು ತೊಳೆದು ಸೇವೆ ಸಲ್ಲಿಸಿದ್ದಾರೆ. ಭಕ್ತರೊಂದಿಗೆ ಸೇರಿ ಪಾತ್ರೆಯನ್ನು ಸ್ವಚ್ಛಗೊಳಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಖ್ಯಾತಿಯ ಉತ್ತುಂಗದಲ್ಲಿದ್ದರೂ ತಮ್ಮ ಸಂಸ್ಕøತಿಯ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದಕ್ಕಾಗಿ ಈಗ ಪ್ರಿಯಾಂಕಾ ಚೋಪ್ರಾ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಿಯಾಂಕಾ ಶ್ರೀದರ್ಬಾರ್ ಸಾಹಿಬ್‍ನಲ್ಲಿ ಇತರ ಮಹಿಳೆಯರೊಂದಿಗೆ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಸರಳವಾದ ಬೇಬಿ ಗುಲಾಬಿ ಭಾರತೀಯ ಉಡುಪನ್ನು ಧರಿಸಿ ತಲೆಯನ್ನು ದುಪ್ಪಟ್ಟಾದಲ್ಲಿ ಮುಚ್ಚಿಕೊಂಡು ಇವರು ಪಾತ್ರೆ ತೊಳೆಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.
Actress Priyanka Chopra doing sewa at Sri Darbar Sahib (Golden Temple) Amritsar, Punjab. @priyankachopra pic.twitter.com/EftRV2MRNe
— Akashdeep Thind (@thind_akashdeep) March 31, 2026
2026ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪ್ರಿಯಾಂಕಾ ಚೋಪ್ರಾ ಜೋನಾಸ್ ಇತ್ತೀಚೆಗೆ ಭಾರತಕ್ಕೆ ಮರಳಿದರು. ಇಲ್ಲಿನ ಅಮೃತಸರ ವಿಮಾನದಲ್ಲಿ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಿಯಾಂಕಾರನ್ನು ಕಂಡು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು, ಫೋಟೋ ಕೂಡಾ ಕ್ಲಿಕ್ಕಿಸಿದ್ದರು. ಅವರ ಈ ಭೇಟಿಯ ಸಂದರ್ಭದಲ್ಲಿ ಪ್ರಿಯಾಂಕಾ ಗೋಲ್ಡನ್ ಟೆಂಪಲ್‍ಗೂ ಭೇಟಿ ನೀಡಿದ್ದರು.



