ಧುರಂಧರ್ ಸಕ್ಸಸ್ ಬಳಿಕ ನಿಜವಾಗಿಯೂ ಸಿಕ್ಕಿತಾ 1 ಕೋಟಿ ರೂಪಾಯಿ ಬೋನಸ್? : ಏನು ಹೇಳುತ್ತಾರೆ ರಾಕೇಶ್ ಬೇಡಿ
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದಲ್ಲಿ ಗಮನ ಸೆಳೆದ ನಟರಲ್ಲಿ ರಾಕೇಶ್ ಬೇಡಿ ಕಊಡಾ ಒಬ್ಬರು. ಈ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಆದರೆ ಸದ್ಯ ರಾಕೇಶ್ ಅವರಿಗೆ ಪ್ರೊಡಕ್ಷನ್ ಸಂಸ್ಥೆಯಿಂದ 1 ಕೋಟಿ ರೂಪಾಯಿ ಬೋನಸ್ ಸಿಕ್ಕಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ರಾಕೇಶ್ ಬೇಡಿ ಅಲ್ಲಗಳೆದಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ರಾಕೇಶ್ ಬೇಡಿ, `ಈಗ ಒಂದು ವಿಡಿಯೋ ಹರಿದಾಡುತ್ತಿದೆ. ಹಲವರು ನನಗೂ ಈ ವಿಡಿಯೋ ಕಳುಹಿಸಿದ್ದಾರೆ. ಕೆಲವರು ನಾನು 1 ಕೋಟಿ ರೂಪಾಯಿ ಸ್ವೀಕರಿಸಿದ್ದೇನೆ ಎಂದು ಸಂಪರ್ಕಿಸಿದ್ದಾರೆ. ಅಣ್ಣಾ.. ಈ ಹಣ ಎಲ್ಲಿದೆ, ಯಾರ ಮನೆಯಲ್ಲಿ ಇಡಲಾಗಿದೆ, ಯಾರ ಜೇಬಿನಲ್ಲಿದೆ, ಯಾರಾದರೂ ಹೇಳಿ ಸ್ವಾಮಿ. ಅದು ಯಾರ ಅಕೌಂಟ್ಗೆ ಹೋಗಿದೆ. ನನ್ನ ಅಕೌಂಟಿಗೆ ಬಂದಿಲ್ಲ. ನನ್ನ ಅಕೌಂಟಿನಲ್ಲಿ ಹಣ ಕಾಣಿಸುತ್ತಿಲ್ಲ. ಮತ್ತು ಆ ಹಣ ಬಂದರೆ ನಾನು ನಿಮಗೆ ತಿಳಿಸುತ್ತೇನೆ ಅಥವಾ ತಿಳಿಸದೆಯೂ ಇರಬಹುದು. ಆದರೆ ಸದ್ಯಕ್ಕೆ, ನಾನು ಹಣ ಪಡೆದುಕೊಂಡಿಲ್ಲ. ಯಾರಾದರೂ ನನಗೆ ಆ ಹಣ ತೆಗೆಸಿಕೊಡಿ… ನನಗೆ ಹಣ ಬಂದಿಲ್ಲ’ ಎಂದು ತಮಾಷೆಯ ದಾಟಿಯಲ್ಲಿ ಇವರು ಪ್ರತಿಕ್ರಿಯೆ ನೀಡಿದ್ದಾರೆ.
ಈಗ ಈ ವಿಡಿಯೋ ಕೂಡಾ ವೈರಲ್ ಆಗುತ್ತಿದೆ.



