Bollywood
ರಣ್ಬೀರ್-ಯಶ್ ನಟನೆಯ `ರಾಮಾಯಣ’ ಚಿತ್ರದ ಟೀಸರ್ ರಿಲೀಸ್

ಬಾಲಿವುಡ್ ನಟ ರಣ್ಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ `ರಾಮಾಯಣ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ನಲ್ಲಿ ಕೇವಲ ರಾಮನ ಪಾತ್ರದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ.
ಈ ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ‘ಸೀತೆ’ಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಯಶ್ ರಾವಣನ ಪಾತ್ರ ನಿರ್ವಹಿಸಲಿದ್ದಾರೆ. ಸನ್ನಿ ಡಿಯೋಲ್ ‘ಹನುಮಂತ’ನಾಗಿ ಮತ್ತು ರವಿ ದುಬೆ ‘ಲಕ್ಷ್ಮಣ’ನಾಗಿ ಬಣ್ಣಹಚ್ಚಿದ್ದಾರೆ. ಕಾಜಲ್ ಅಗರ್ವಾಲ್, ರಾಹುಲ್ ಪ್ರೀತಿ ಸಿಂಗ್ ಕೂಡಾ ಈ ಚಿತ್ರದಲ್ಲಿದ್ದಾರೆ.
View this post on Instagram
ನಿತೀಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಮಾಯಣ ಭಾಗ 1 ಈ ದೀಪಾವಳಿಗೆ ಬಿಡುಗಡೆ ಆಗಲಿದ್ದು, ಭಾಗ 2 2027ರ ದೀಪಾವಳಿ ವೇಳೆ ಬಿಡುಗಡೆಯಾಗಲಿದೆ.



