ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಗಳಿಸಿದ ದೃಶ್ಯಂ 3 : ಮೋಹನ್ ಲಾಲ್ ಕೃತಜ್ಞತೆ
ಕಳೆದ ವಾರ ಬಿಡುಗಡೆಯಾಗಿದ್ದ ಮೋಹನ್ ಲಾಲ್ ಅಭಿನಯದ ಮಲಯಾಳಂ ಸಿನಿಮಾ `ದೃಶ್ಯಂ 3′ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಗಳಿಕೆಯನ್ನು ದಾಟಿದೆ. ಈ ಖುಷಿಯನ್ನು ಹಂಚಿಕೊಂಡಿರುವ ಮೋಹನ್ ಲಾಲ್ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.
ಟ್ವಿಟರ್ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಮೋಹನ್ ಲಾಲ್ `ಮೂರು ಚಿತ್ರಗಳು. ಮೂರು ಅಧ್ಯಾಯಗಳು. ಒಂದು ಮುರಿಯದ ಬಂಧ. ಜಾರ್ಜ್ಕುಟ್ಟಿ ಮತ್ತು ಕುಟುಂಬದೊಂದಿಗೆ ನಡೆದಿದ್ದಕ್ಕಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
Three films. Three chapters. One unbroken bond.
Thank you for walking with Georgekutty & Family#Drishyam3
@jeethu4ever @antonypbvr @KumarMangat @jayantilalgada @AbhishekPathakk @aashirvadcine @PanoramaMovies @PenMovies @Rajeshmenon1969 #RavindraAuti @ram_rampagepix… pic.twitter.com/3wMtam2MEG
— Mohanlal (@Mohanlal) May 28, 2026
ಜೀತು ಜೋಸೆಫ್ ನಿರ್ದೇಶಿಸಿದ ಈ ಸಿನಿಮಾ ಈ ಸರಣಿಯ ಮೂರನೇ ಹಾಗೂ ಕೊನೆಯ ಅಧ್ಯಾಯವಾಗಿದೆ. ಮೋಹನ್ ಲಾಲ್ ಅವರ ಜನ್ಮದಿನದಂದು ಮೇ 21, 2026 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

