Sandalwood

ಅಪ್ಪು ಅಭಿನಯದ ಆಕಾಶ್ ರೀರಿಲೀಸ್ : ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ರಮ್ಯಾ

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಸೂಪರ್‌ ಹಿಟ್ ಸಿನಿಮಾ ಆಕಾಶ್ ಮತ್ತೆ ತೆರೆ ಮೇಲೆ ಅಬ್ಬರಿಸುತ್ತಿದೆ. ಮಾರ್ಚ್‌ 13ರಂದು ಮರುಬಿಡುಗಡೆಯಾದ ಸಿನಿಮಾವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಅಪ್ಪು ಅವರಿಗೆ ನಾಯಕಿಯಾಗಿ ನಟಿಸಿದ್ದ ರಮ್ಯಾ ಥಿಯೇಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾರೆ. ರಮ್ಯಾ ಅವರು ಈ ಸಿನಿಮಾದ ಸೂಪರ್‌ ಹಿಟ್ ‘ನೀನೇ ನೀನೇ ನನಗೆಲ್ಲಾ ನೀನೇ’ ಹಾಡನ್ನು ಅಭಿಮಾನಿಗಳ ಜೊತೆ ಹಾಡಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.


2005ರಲ್ಲಿ ಬಿಡುಗಡೆಯಾಗಿದ್ದ ಆಕಾಶ್ 25 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತ್ತು. ಮುಂದಿನ ವಾರ ಪುನೀತ್ ರಾಜ್‌ಕುಮಾರ್ ಅವರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button