Sandalwood
ನಿರ್ದೇಶಕ ಸಿಂಪಲ್ ಸುನಿ ಮನೆಗೆ ಹೊಸ ಅತಿಥಿ : ಮಗನನ್ನು ಸ್ವಾಗತಿಸಿದ ದಂಪತಿ
ಸ್ಯಾಂಡಲ್‍ವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸಿಂಪಲ್ ಸುನಿ ಹಾಗೂ ಪತ್ನಿ ಸೌಂದರ್ಯ ದಂಪತಿ ಮನೆಗೆ ಮುದ್ದಾದ ಮಗನ ಆಗಮನವಾಗಿದೆ. ಮಾರ್ಚ್ 11ರ ಬೆಳಗ್ಗೆ ಸೌಂದರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸಂಗತಿಯನ್ನು ಸಿಂಪಲ್ ಸುನಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
`ಮಾರ್ಚ್ 11 ರ 9:16 ಕ್ಕೆ ಅಪ್ಪಟ್ಟ ಅಪರಂಜಿಯೊಬ್ಬ ನಮ್ಮ ಜೀವನದಲ್ಲಿ ಬಂದಿದ್ದಾನೆ … ಈ ಸೃಷ್ಟಿಗೆ ನಮನಗಳು’ ಎಂದು ಸಿಂಪಲ್ ಸುನಿ ಬರೆದುಕೊಂಡಿದ್ದಾರೆ.
View this post on Instagram
ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಸಿನಿಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಸುನಿ, 2017ರ ಫೆಬ್ರವರಿಯಲ್ಲಿ ಸೌಂದರ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.



