Bollywood
ನಾನು ಗರ್ಭಿಣಿ ಅಲ್ಲ’ : 66 ವರ್ಷದ ನೀನಾ ಗುಪ್ತ ಸ್ಪಷ್ಟನೆ : ಏನಿದರ ಕಾರಣ…?
ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಗರ್ಭಿಣಿ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಇದಕ್ಕೆ ಕಾರಣ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹದ ಆರತಕ್ಷತೆಯಲ್ಲಿ ಸಂದರ್ಭದಲ್ಲಿ ಧರಿಸಿದ್ದ ಸೀರೆ. ಈ ಉಡುಪಿನಲ್ಲಿ ನೀನಾ ಗುಪ್ತ ಗರ್ಭಿಣಿಯಂತೆ ಕಾಣುತ್ತಿದ್ದರು. ಹೀಗಾಗಿ 66 ವರ್ಷದ ನಟಿ ಗರ್ಭಿಣಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.
View this post on Instagram
ಈ ಸುದ್ದಿ ಬಗ್ಗೆ ಈಗ ಸ್ವತಃ ನೀನಾ ಗುಪ್ತ ಅವರೇ ಸ್ಪಷ್ಟನೆ ನೀಡಿದ್ದಾರೆ. ತಾನು ಗರ್ಭಿಣಿ ಅಲ್ಲ. ನಾನು ಧರಿಸಿದ್ದ ಸೀರೆಯ ಮೆಟೀರಿಯಲ್ ದಪ್ಪವಾಗಿದ್ದ ಕಾರಣ ಹಾಗೆ ಕಂಡಿದೆ ಎಂದು ನೀನಾ ಗುಪ್ತ ಹೇಳಿದ್ದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.



