Sandalwood

ನಟ ಶಿವರಾಜ್ ಕುಮಾರ್ ಅವರನ್ನು ಮದುವೆ ಆಗುವ ಆಸೆ ಹೊಂದಿದ್ದರಾ ಸುಧಾರಾಣಿ? : ಗಾಸಿಪ್‌ಗೆ ಸಖತ್ತಾಗಿಯೇ ಪ್ರತಿಕ್ರಿಯೆ ನೀಡಿದ ನಟಿ

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಹಾಗೂ ನಟಿ ಸುಧಾರಾಣಿ ಸ್ಯಾಂಡಲ್‌ವುಡ್‌ನ ಯಶಸ್ವಿ ಜೋಡಿಗಳು. ಆನಂದ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿಯ ಆನ್‌ಸ್ಕ್ರೀನ್ ಕೆಮೆಸ್ಟ್ರಿ ಸಖತ್ತಾಗಿಯೇ ವರ್ಕೌಟ್ ಆಗಿತ್ತು. ಇದಾದ ಬಳಿಕ ಮನ ಮೆಚ್ಚಿದ ಹುಡುಗಿ, ರಣರಂಗ, ಸಂಯುಕ್ತಾ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಇವರು ಜನರ ಮನಸ್ಸು ಗೆದ್ದಿದ್ದರು.

ತೆರೆಯ ಹಿಂದೆ ಶಿವರಾಜ್‌ ಕುಮಾರ್ ಹಾಗೂ ನಟಿ ಸುಧಾರಾಣಿ ಉತ್ತಮ ಫ್ರೆಂಡ್ಸ್ ಕೂಡಾ ಹೌದು. ಆದರೆ ಸ್ಟಾರ್‌ಗಳ ಬಗ್ಗೆ ಗಾಸಿಪ್ ಹರಡುವುದು ಹೊಸದೇನೂ ಅಲ್ಲ. ಅದೇ ರೀತಿ ಇತ್ತೀಚೆಗೆ ಸುಧಾರಾಣಿ ಶಿವರಾಜ್‌ಕುಮಾರ್ ಅವರನ್ನು ಮದುವೆಯಾಗಲು ಆಸೆ ಪಟ್ಟಿದ್ದರು ಎಂಬರ್ಥದಲ್ಲಿ ಪೋಸ್ಟ್ ಒಂದು ವೈರಲ್ ಆಗಿತ್ತು. ಇದನ್ನು ನೋಡಿದ ಸುಧಾರಾಣಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಖತ್ತಾಗಿಯೇ ಟಾಂಗ್ ಕೊಟ್ಟಿದ್ದಾರೆ. ತಮಾಷೆಯ ದಾಟಿಯಲ್ಲಿಯೇ ಇಂತಹ ಸುದ್ದಿಗಳ ಬಗ್ಗೆ ಸುಧಾರಾಣಿ ಚಾಟಿ ಬೀಸಿದ್ದಾರೆ.

ಶ್ವಾನಗಳು ಮಾತನಾಡುವ ರೀತಿಯಲ್ಲಿ ತಮ್ಮ ವಿಡಿಯೋ ಮಾಡಿರುವ ಸುಧಾರಾಣಿ, ವಿಡಿಯೋದ ಕೊನೆಯಲ್ಲಿ ಆಯ್ಕೊಂಡು ತಿನ್ನೋರೆಲ್ಲ ಕಂಟೆಂಟ್ ಕ್ರೀಯೇಟರ್ಸ್ ಆದರೆ ಹೀಗೆ ಆಗೋದು ಎಂದು ಟಾಂಗ್ ನೀಡಿದ್ದಾರೆ.

 

View this post on Instagram

 

A post shared by Dr.Sudharani (@sudharanigovardhan)


`ದಯವಿಟ್ಟು ಕೆಲವು ಬೇಸಿಕ್ ಎಥಿಕ್ಸ್‌ ಅನ್ನು ತೋರಿಸಿ. ಜನರು ಕೇವಲ ವ್ಯೂವ್ಸ್ ಪಡೆಯಲು ಸುಳ್ಳು ಮಾಹಿತಿಯನ್ನು ಹರಡುವುದನ್ನು ನೋಡುವಾಗ ಬೇಸರವಾಗುತ್ತದೆ. ಒಳ್ಳೆಯದ್ದನ್ನು ಮಾಡಿ- ಶ್ರಮವಹಿಸಿ ಕೆಲಸ ಮಾಡಿ- ಪ್ರಾಮಾಣಿಕವಾಗಿರಿ ಹಾಗೂ ನಿಮ್ಮ ಯಶಸ್ಸನ್ನು ಸರಿಯಾದ ರೀತಿಯಲ್ಲಿ ಗಳಿಸಿ’ ಎಂದು ಸುಧಾರಾಣಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button