ವೈಯಕ್ತಿಕ ಜೀವನದ ಬಗೆಗಿನ ವದಂತಿಗಳ ಬಗ್ಗೆ ತ್ರಿಷಾ ಕಿಡಿ
ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ತಮ್ಮ ವೈಯಕ್ತಿಕ ಬದುಕಿನ ಬಗೆಗೆ ಹರಡುತ್ತಿರುವ ವದಂತಿಗಳ ಬಗ್ಗೆ ಕಿಡಿಕಾರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ತ್ರಿಷಾ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದರಲ್ಲಿ Apparently, I’ve quit film. Married a rich businessman, and I am raising quadruplets who turned two yesterday! Anything else I should add, or did we cover today’s fiction quote? – (` ನಾನು ಸಿನಿಮಾ ರಂಗವನ್ನೇ ಬಿಟ್ಟಿದ್ದೇನೆ ಅಂತ ಕಾಣುತ್ತಿದೆ. ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದೇನೆ, ನಿನ್ನೆಗೆ ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ನಾನು ಬೆಳೆಸುತ್ತಿದ್ದೇನೆ! ಇನ್ನೇನಾದರೂ ಸೇರಿಸಬೇಕೇ ಅಥವಾ ಇಂದಿನ ಕಾಲ್ಪನಿಕ ಕೋಟ್ ಅನ್ನು ನಾವು ಕವರ್ ಮಾಡಿದ್ದೇವೆಯೇ?”) ಎಂದು ತ್ರಿಷಾ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಪತ್ರಕರ್ತ ಹಾಗೂ ನಟ ಚಿತ್ರಾ ಲಕ್ಷ್ಮಣನ್, ತ್ರಿಶಾ ತಮ್ಮ ನಟನಾ ವೃತ್ತಿಯನ್ನು ತ್ಯಜಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ತ್ರಿಷಾ ಈ ಪೋಸ್ಟ್ ಹಾಕಿದ್ದಾರೆ.
ಆದರೆ ವರದಿಯನ್ನು ತ್ರಿಷಾ ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲವಾದರೂ, ಇತ್ತೀಚೆಗೆ ತ್ರಿಷಾ ಯಾವುದೇ ಚಿತ್ರಗಳಿಗೆ ಸಹಿ ಮಾಡಿಲ್ಲವಾದ್ದರಿಂದ ಊಹಾಪೋಹಗಳು ಮತ್ತಷ್ಟು ಜೋರಾಗಿವೆ.
ಇತ್ತೀಚೆಗೆ ತ್ರಿಷಾ ಅವರ ಹೆಸರು ನಟ ವಿಜಯ್ ಅವರ ಹೆಸರಿನೊಂದಿಗೆ ಥಳುಕು ಹಾಕಿಕೊಂಡಿತ್ತು. ಅದರಲ್ಲೂ ವಿವಾಹ ಆರತಕ್ಷತೆಯಲ್ಲಿ ವಿಜಯ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ತ್ರಿಷಾ ಇನ್ನಷ್ಟು ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅದೂ ಅಲ್ಲದೆ ವಿಜಯ್ ಅವರ ಪತ್ನಿ ಸಂಗೀತ ತಮ್ಮ ವಿಚ್ಛೇದನ ಅರ್ಜಿಯಲ್ಲಿ ವಿಜಯ್ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಉಲ್ಲೇಖಿಸಿದ್ದರು.



