Sandalwood

ಬಿಗ್‍ಬಾಸ್‍ನಲ್ಲಿ ಜಗಳ… ಹೊರಗಡೆ ಸ್ನೇಹ… : ಹೀಗಿತ್ತು ನೋಡಿ ರಕ್ಷಿತಾ-ದ್ರುವಂತ್ ಭೇಟಿಯ ಕ್ಷಣಗಳು

ಬಿಗ್‍ಬಾಸ್ ಸೀಸನ್ 12ರಲ್ಲಿ ತಮ್ಮ ಜಗಳ, ಪರಸ್ಪರ ಕಾಲೆಳೆಯುವ ಮೂಲಕ ಗಮನ ಸೆಳೆದಿದ್ದ ಜೋಡಿ ಎಂದರೆ ಅದು ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್‍ರದ್ದು. ಹೀಗೆ ಬಿಗ್‍ಬಾಸ್ ಮನೆಯೊಳಗೆ ಹಾವು ಮುಂಗುಸಿಯಂತಿದ್ದ ಈ ಇಬ್ಬರು ಈಗ ಪರಸ್ಪರ ಭೇಟಿಯಾಗಿ ಆತ್ಮೀಯವಾಗಿ ಕಳೆದಿದ್ದಾರೆ. ಈ ಖುಷಿಯ ಕ್ಷಣದ ವಿಡಿಯೋವನ್ನು ರಕ್ಷಿತಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ರಘು ಹಾಗೂ ಮಾಳು ನಿಪನಾಳರನ್ನು ಭೇಟಿಯಾಗಿದ್ದ ರಕ್ಷಿತಾ ಈಗ ಧ್ರುವಂತ್ ಅವರನ್ನೂ ಭೇಟಿಯಾಗಿದ್ದಾರೆ. `ಮೊದಲ ಬಾರಿಗೆ ಧ್ರುವಂತ್ ಅಣ್ಣನ ಜೊತೆ ಅಪ್ಪೆ ಸಾರು ಪ್ರಯತ್ನಿಸುತ್ತಿದ್ದೇನೆ’ ಎಂಬ ಕ್ಯಾಪ್ಶನ್‍ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.


‘ಧ್ರುವಂತ್ ಅಣ್ಣನನ್ನು ನೋಡಿ ತುಂಬಾ ಖುಷಿಯಾಯಿತು. ಬಿಗ್‍ಬಾಸ್ ಮನೆಯಲ್ಲಿ ದಿನದ 24 ಗಂಟೆ ಜೊತೆಯಾಗಿದ್ದಾಗ ಕಿತ್ತಾಡುತ್ತಿದ್ದೆವು. ಆದರೆ, ಬಿಗ್‍ಬಾಸ್ ಮನೆಯಿಂದ ಆಚೆ ಬಂದ ನಂತರ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದರು ರಕ್ಷಿತಾ ಹೇಳಿದರೆ, ನನಗೂ ಹೀಗೆಯೇ ಅನಿಸುತ್ತಿತ್ತು ಎಂಬರ್ಥದಲ್ಲಿ ಧ್ರುವಂತ್ ಧ್ವನಿಗೂಡಿಸಿದ್ದಾರೆ. ಜೊತೆಗೆ ಧ್ರುವಂತ್ ಅವರನ್ನು ರಕ್ಷಿತಾ ತಮ್ಮ ಮನೆಗೂ ಆಹ್ವಾನಿಸಿದ್ದಾರೆ.

ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button