Kollywood

ಇನ್ನೂ ರಿಲೀಸ್ ಆಗದ ವಿಜಯ್ ಚಿತ್ರ ಪ್ರಸಾರ! : ಕೇಬಲ್ ಆಪರೇಟರ್ ಬಂಧನ

ನಟ, ರಾಜಕಾರಣಿ ವಿಜಯ್ ಅಭಿನಯದ `ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಮುನ್ನವೇ ಮೊನ್ನೆ ಆನ್‍ಲೈನ್‍ನಲ್ಲಿ ಸೋರಿಕೆಯಾಗಿತ್ತು. ಇದಾದ ನಂತರ ಚಿತ್ರದ ಪೈರೇಟೆಡ್ ಆವೃತ್ತಿಯನ್ನು ಪ್ರಸಾರ ಮಾಡಿದ ಆರೋಪದಲ್ಲಿ ಕೊಯಮತ್ತೂರಿನಲ್ಲಿ ಕೇಬಲ್ ಆಪರೇಟರ್ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಎಸ್ ಪಳನಿಸಾಮಿ ಎಂದು ಗುರುತಿಸಲಾಗಿದೆ.

ರಾಸಿ ಪ್ರೈಮ್ ಮೂವಿ ಚಾನೆಲ್‍ನಲ್ಲಿ ಈ ಚಿತ್ರ ಪ್ರಸಾರವಾಗಿದೆ ಎಂದು ತಮಿಳಗ ವೆಟ್ರಿ ಕಳಗಂನ ಕಾರ್ಯನಿರ್ವಾಹಕ ಮೋಹನಪ್ರಿಯ ದೂರು ನೀಡಿದ್ದರು.

ಆರು ಮಂದಿ ಬಂಧನ
ಇನ್ನು ವಿಜಯ್ `ಜನ ನಾಯಗನ್’ ಚಿತ್ರದ ಸಂಪೂರ್ಣ ಭಾಗ ಆನ್‍ಲೈನ್‍ನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಭಾನುವಾರ ಆರು ಜನರನ್ನು ಬಂಧಿಸಲಾಗಿದೆ. ಏಪ್ರಿಲ್ 9ರ ತಡರಾತ್ರಿ ಚಿತ್ರದ ಒಂದು ಭಾಗ ಆನ್‍ಲೈನ್‍ನಲ್ಲಿ ಸೋರಿಕೆಯಾಗಿದ್ದರೆ, ನಂತರ ಇಡೀ ಚಿತ್ರ ಸೋರಿಕೆಯಾಗಿತ್ತು ಎನ್ನಲಾಗುತ್ತಿದೆ.

ಹೆಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬೈಜು ಮತ್ತು ಬಾಬಿ ಡಿಯೋಲ್ ಸೇರಿದಂತೆ ಹಲವರು ನಟಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button