Bollywood

ಧುರಂಧರ್: ದಿ ರಿವೆಂಜ್ : ಆಲ್ ಟೈಮ್ ಅತಿ ದೊಡ್ಡ ಹಿಂದಿ ಓಪನರ್ : ಮೊದಲ ದಿನ ಗಳಿಕೆ ಎಷ್ಟು?

ರಣವೀರ್ ಸಿಂಗ್ ಅಭಿನಯದ ಸ್ಪೈ ಥ್ರಿಲ್ಲರ್ ಧುರಂಧರ್: ದಿ ರಿವೆಂಜ್ ಮೊದಲ ದಿನದ ಗಳಿಕೆಯಲ್ಲಿಯೇ ಸಾಧನೆ ಮಾಡಿದೆ. ಹಿಂದಿಯಲ್ಲಿ ಇದು ಹೆಚ್ಚು ಗಳಿಕೆ ಕಂಡ ಚಿತ್ರವಾಗಿದೆ. ಈ ಚಿತ್ರ ಮೊದಲ ದಿನವೇ 102.5 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ 99.10 ಕೋಟಿ ರೂಪಾಯಿ ಮೂಲ ಹಿಂದಿ ಆವೃತ್ತಿಯಿಂದಲೇ ಬಂದಿದೆ.

ಹಿಂದಿಯಲ್ಲಿ ತೆಲುಗಿನ ಚಿತ್ರದ `ಪುಷ್ಪ: ದಿ ರೂಲ್’ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವಾಗಿತ್ತು. ಇದು ಬಿಡುಗಡೆಯಾದ ದಿನದಂದು ಹಿಂದಿ ಆವೃತ್ತಿಯ ಮೂಲಕ 70.30 ಕೋಟಿ ರೂಪಾಯಿ ಗಳಿಸಿತ್ತು.

ಧುರಂಧರ್ 2 ಪೇಯ್ಡ್ ಪ್ರೀಮಿಯರ್ ಶೋನಲ್ಲಿ 43 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದು ಈ ತನಕ ಭಾರತದಲ್ಲಿ 145.55 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಆದಿತ್ಯ ಧರ್ ನಿರ್ದೇಶನದ ಧುರಂಧರ್: ದಿ ರಿವೆಂಜ್ ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button