Bollywood

ಮತ್ತೊಂದು ಮಲ್ಟಿಪೆಕ್ಸ್ ಥಿಯೇಟರ್ ತೆರೆದ ಅಜಯ್ ದೇವಗನ್

ಬಾಲಿವುಡ್ ನಟ ಅಜಯ್ ದೇವಗನ್ ಒಡೆತನದ ಮತ್ತೊಂದು ಮಲ್ಟಿಪ್ಲೆಕ್ಸ್ ಪ್ರಾರಂಭವಾಗಿದೆ. ಅಜಯ್ ದೇವಗನ್ ಒಡೆತನದ ಮಲ್ಟಿಪೆಕ್ಸ್ ಚೈನ್ ದೇವಗನ್ ಸಿನೆಕ್ಸ್ ಗುರುವಾರ ಥಾಣೆಯ ಹಿರಾನಂದಾನಿ ಎಸ್ಟೇಟ್‍ನಲ್ಲಿರುವ ಬೆಲ್ಲೋನಾ ಟವರ್, ದಿ ವಾಕ್‍ನಲ್ಲಿ ಹೊಸ ಥಿಯೇಟರ್ ಆರಂಭಿಸಿದೆ.

ಈ ಮಲ್ಟಿಪ್ಲೆಕ್ಸ್ ಒಟ್ಟು 953 ಆಸನಗಳ ಸಾಮಥ್ರ್ಯವಿರುವ ಐದು ಐಷಾರಾಮಿ ಸ್ಕ್ರೀನ್ ಅನ್ನು ಹೊಂದಿದೆ. ಈ ಸ್ಕ್ರೀನ್‍ಗಳು “ಅಮೋರ್” ಎಂಬ ಹೆಸರಿನ ಐಷಾರಾಮಿ ಆಲ್-ರೆಕ್ಲೈನರ್ ಆಡಿಟೋರಿಯಂ ಅನ್ನು ಸಹ ಒಳಗೊಂಡಿದೆ.

 

View this post on Instagram

 

A post shared by Devgn CineX (@devgncinex)


`ದೇವಗನ್ ಸಿನೆಕ್ಸ್‍ನೊಂದಿಗೆ, ಪ್ರೇಕ್ಷಕರು ಸಿನಿಮಾವನ್ನು ನೋಡುವ ವಿಧಾನವನ್ನು ಹೆಚ್ಚಿಸುವ ಅತ್ಯುತ್ತಮ ತಂತ್ರಜ್ಞಾನ ಮತ್ತು ಸೌಕರ್ಯದೊಂದಿಗೆ ಥಿಯೇಟರ್ ಅನುಭವವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ಅಜಯ್ ದೇವಗನ್ ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button