ಬಿಡುಗಡೆಯಾಗಿದೆ `ವಾಲ್ಮೀಕಿ ರಾಮಾಯಣ’ ಚಿತ್ರದ ಫಸ್ಟ್ ಲುಕ್
ಮುಂಬರುವ `ವಾಲ್ಮೀಕಿ ರಾಮಾಯಣ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಗುರುವಾರ ಶ್ರೀರಾಮನವಮಿಯ ಸಂದರ್ಭದಲ್ಲಿ ಚಿತ್ರದ ತಯಾರಕರು ಈ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ಆಳವಾದ ಅರ್ಥವನ್ನು ಹೊಂದಿರುವ ಭಗವಾನ್ ಶ್ರೀರಾಮನ ಪಾದವನ್ನು ತೋರಿಸುವ ಫೋಟೋವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. `ಎಲ್ಲಿ ತನಕ ಪರ್ವತಗಳು ನಿಂತಿರುತ್ತವೋ, ನದಿಗಳು ಹರಿಯುತ್ತಿರುತ್ತವೋ ಅಲ್ಲಿಯ ತನಕ ರಾಮಾಯಣವು ಜೀವಂತವಾಗಿರುತ್ತದೆ’ ಎಂಬ ಮಾತಿನೊಂದಿಗೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
As long as mountains stand and rivers flow,
the Ramayana will live on.@BhavnaTalwar @resulp @sabucyril @itsanandneel #DrChandraprakashDwivedi #BinodPradhan #AlokSinha @the_ramayan pic.twitter.com/Z5OJWj26ft— sabu cyril (@sabucyril) March 26, 2026
ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕಿ ಭಾವನಾ ತಲ್ವಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಬು ಸಿರಿಲ್ ಜೊತೆಗೆ ಛಾಯಾಗ್ರಾಹಕ ಬಿನೋದ್ ಪ್ರಧಾನ್ ಮತ್ತು ಧ್ವನಿ ವಿನ್ಯಾಸಕ ರೆಸುಲ್ ಪೂಕುಟ್ಟಿ ಈ ಯೋಜನೆಯ ಭಾಗವಾಗಿದ್ದಾರೆ. ಅಕ್ಟೋಬರ್ 2 ರಂದು ವಾಲ್ಮೀಕಿ ರಾಮಾಯಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



