News Roundup

Virat Kohli Tattoo : ಐಪಿಎಲ್ 2026 ಆರಂಭಕ್ಕೂ ಮುನ್ನ ಫುಲ್ ಸ್ಲೀವ್ ಟ್ಯಾಟೂ ಹಾಕಿಸಿಕೊಂಡ ವಿರಾಟ್ ಕೊಹ್ಲಿ : ಏನಿದರ ಅರ್ಥ?

ಇಂಡಿಯನ್ ಪ್ರೀಮಿಯರ್ ಲೀಗ್ 2026 ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ ಫುಲ್ ಸ್ಲೀವ್ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ತನ್ನ ಎಡಗೈಯ ಪೂರ್ಣ ತೋಳಿನಲ್ಲಿ ಹೊಸ ಹಚ್ಚೆ ಹಾಕಿಸಿಕೊಂಡು ಹೊಸ ಹುಮ್ಮಸ್ಸಿನಿಂದ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ ವಿರಾಟ್ ಕೊಹ್ಲಿ.

`ಏಲಿಯನ್ಸ್ ಟ್ಯಾಟೂ ಇಂಡಿಯಾ’ ವಿರಾಟ್ ಅವರ ಟ್ಯಾಟೂ ಅನ್ನು ವಿನ್ಯಾಸ ಮಾಡಿದ್ದು, ಈ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಕಂಪನಿಯ ಪ್ರಕಾರ, ಈ ಟ್ಯಾಟೂ ವಿರಾಟ್ ಕೊಹ್ಲಿ ಅವರ ಪ್ರಯಾಣವನ್ನು ಸೂಚಿಸುತ್ತದೆ. `ಇದು ಮತ್ತೊಂದು ಟ್ಯಾಟೂ ಸೇರಿಸುವ ಬಗೆ ಅಲ್ಲ. ಇದು ಆಳವಾದ ಅರ್ಥವನ್ನು ಹೊಂದಿರುವ ಏನನ್ನಾದರೂ ಸೃಷ್ಟಿಸುವ ಬಗೆಯಾಗಿದೆ. ಅವರು ಯಾರಾಗಿದ್ದಾರೆ ಎಂಬುದನ್ನು ಪ್ರತಿಬಿಂಬಿಸುವ ಏನನ್ನಾದರೂ ರಚಿಸುವ ಪರಿ’ ಎಂದು ಏಲಿಯನ್ಸ್ ಟ್ಯಾಟೂ ತನ್ನ ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದೆ.

 

View this post on Instagram

 

A post shared by Aliens Tattoo (@alienstattooindia)


ಮಾರ್ಚ್ 28 ರಂದು 19ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರಥಮ ಪಂದ್ಯದಲ್ಲಿ ಆರ್‌ಸಿಬಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಇತ್ತೀಚೆಗಷ್ಟೇ ಆರ್‌ಸಿಬಿಯ ಮಾಲಿಕತ್ವ ಕೂಡಾ ಬದಲಾಗಿದೆ. ಭಾರೀ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಾಟವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button