New Royal Enfield Guerrilla 450 : ಬಿಡುಗಡೆಗೆ ಸಜ್ಜಾಗಿದೆ ಹೊಸ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 : ಟೀಸರ್ ರಿಲೀಸ್ : ಶುಕ್ರವಾರ ಬೈಕ್ ಲಾಂಚ್
ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450ಯ ನವೀಕೃತ ಆವೃತ್ತಿ ಬಿಡುಗಡೆಗೆ ಸಜ್ಜಾಗಿದೆ. 2026 ಮಾರ್ಚ್ 27ರ ಶುಕ್ರವಾರ ಅಪ್‌ಡೇಟೆಡ್ ಎನ್‌ಫೀಲ್ಡ್ ಗೆರಿಲ್ಲಾ 450 ಲಾಂಚ್ ಆಗುತ್ತಿದೆ. ಇದಕ್ಕೆ ಮುಂಚಿತವಾಗಿ ಈ ಬೈಕ್‌ನ ಟೀಸರ್ ರಿಲೀಸ್ ಆಗಿದೆ.
ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 2024ರಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ಈ ಬೈಕ್ ಪಡೆಯುತ್ತಿರುವ ಮೊದಲ ಅಪ್‌ಡೇಟ್ ಇದಾಗಿದೆ. ಗೆರಿಲ್ಲಾ 450 ಪ್ರಸ್ತುತ ಬ್ರಾವಾ ಬ್ಲೂ, ಶ್ಯಾಡೋ ಆಶ್, ಪೀಕ್ಸ್ ಬ್ರಾಂಜ್, ಸ್ಮೋಕ್ ಸಿಲ್ವರ್, ಪ್ಲಾಯಾ ಬ್ಲ್ಯಾಕ್ ಮತ್ತು ಗೋಲ್ಡ್ ಡಿಪ್‌ನಂತಹ ಬಣ್ಣಗಳಲ್ಲಿ ಸಿಗುತ್ತಿದೆ. ಆದರೆ ಹೊಸ ಆವೃತ್ತಿಯಲ್ಲಿ ಇನ್ನಷ್ಟು ಬಣ್ಣದ ಆಯ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಯಾಂತ್ರಿಕವಾಗಿ ಈ ಬೈಕ್ 452 ಸಿಸಿ, ಲಿಕ್ವಿಡ್-ಕೂಲ್ಡ್ ಶೆರ್ಪಾ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ ಸುಮಾರು 40 ಎಚ್‌ಪಿ ಶಕ್ತಿ ಮತ್ತು 40 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಬಹುತೇಕ ಹೊಸ ಆವೃತ್ತಿಯಲ್ಲೂ ಯಾಂತ್ರಿಕವಾಗಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಆದರೆ ಈ ಬೈಕ್‌ಗೆ ಇನ್ನಷ್ಟು ವೈಶಿಷ್ಟ್ಯಗಳು ಸೇರ್ಪಡೆಯಾಗುವುದನ್ನು ನಿರೀಕ್ಷಿಸಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಬೈಕ್‌ನ ಎಕ್ಸ್ ಶೋರೂಮ್ ಬೆಲೆ 2.56 ಲಕ್ಷದಿಂದ ಆರಂಭವಾಗುತ್ತದೆ. ನವೀಕೃತ ಬೈಕ್‌ನ ಬೆಲೆ ಹಾಗೂ ಇತರ ವಿವರಗಳು ನಾಳೆ ಬಿಡುಗಡೆಯ ಬಳಿಕ ಸಿಗಲಿದೆ.



