Bollywood

ಆಸ್ಪತ್ರೆಗೆ ದಾಖಲಾದ ನಟಿ ಸಬಾ ಆಜಾದ್ : ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಪ್ರಿಯತಮ ಹೃತಿಕ್ ರೋಷನ್

ನಟಿ ಸಬಾ ಆಜಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಾವಲಂಬಿ ಸೈಕ್ಲೋಸ್ಪೊರಾ ಕ್ಯಾಯೆಟನೆನ್ಸಿಸ್ ರೋಗನಿರ್ಣಯದ ಬಳಿಕ ಎರಡು ವಾರಗಳಲ್ಲಿ ನಾಲ್ಕು ಕೆಜಿ ತೂಕವನ್ನು ಇವರು ಕಳೆದುಕೊಂಡಿದ್ದಾರೆ.

ಶುಕ್ರವಾರ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಸಬಾ ಆಜಾದ್ ಈ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ತಮಗೆ ಆಸರೆಯಾಗಿರುವ ಗೆಳೆಯ ಹೃತಿಕ್ ರೋಷನ್ ಅವರನ್ನು ಕೊಂಡಾಡಿದ್ದಾರೆ. ತನ್ನ ಇನ್‍ಸ್ಟಾಗ್ರಾಂ ಪೋಸ್ಟ್‍ನಲ್ಲಿ ಇವರು ಆಸ್ಪತ್ರೆಯ ಬೆಡ್‍ನಲ್ಲಿ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Saba Azad (@sabazad)


ನನ್ನ ಜೀವನದ 14 ದಿನಗಳ ಕೆಟ್ಟ ದಿನಗಳು ಎಂದು ಇವರು ಬರೆದುಕೊಂಡಿದ್ದಾರೆ. ಮನೆಯ ಆಹಾರವನ್ನು ಸೇವಿಸಿ, ಹೋದಲ್ಲೆಲ್ಲಾ ನೀರನ್ನು ಹೊತ್ತುಕೊಂಡು ಹೋದರೂ ಸಹ, ಈ ಪರಾವಲಂಬಿಯ ಕಾಯಿಲೆಯಿಂದ ತಾನು ಬಳಲುತ್ತಿದ್ದು, ಎರಡು ವಾರಗಳಲ್ಲಿ 4 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡಿದ್ದೇನೆ ಎಂದು ಇವರು ಹೇಳಿಕೊಂಡಿದ್ದಾರೆ. ಈ ಕಠಿಣ ಸಮಯದಲ್ಲಿ ತನ್ನ ಉತ್ಸಾಹ ಹೆಚ್ಚಿಸಿದಕ್ಕಾಗಿ ಹೃತಿಕ್ ರೋಷನ್ ಅವರಿಗೆ ಇವರು ಕೃತಜ್ಞತೆ ಸಲ್ಲಿಸಿದ್ದಾರೆ.

 

View this post on Instagram

 

A post shared by Saba Azad (@sabazad)


ಹೃತಿಕ್ ಈ ಹಿಂದೆ 2000ರಲ್ಲಿ ಸುಸ್ಸಾನ್ ಖಾನ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಹ್ರೇಹಾನ್ ಮತ್ತು ಹೃಧಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಈ ದಂಪತಿ 2014ರಲ್ಲಿ ಬೇರ್ಪಟ್ಟಿದ್ದರು. ಆದರೆ ವಿಚ್ಛೇದನದ ನಂತರವೂ ಸಹ-ಪೆÇೀಷಕತ್ವದಲ್ಲಿದ್ದಾಗ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.

ಹೃತಿಕ್ ಮತ್ತು ಸಬಾ 2022ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2025ರ ಅಕ್ಟೋಬರ್‍ನಲ್ಲಿ ತಮ್ಮ ಬಾಂಧವ್ಯದ ನಾಲ್ಕು ವರ್ಷವನ್ನು ಇವರು ಸಂಭ್ರಮಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button