ಆಸ್ಪತ್ರೆಗೆ ದಾಖಲಾದ ನಟಿ ಸಬಾ ಆಜಾದ್ : ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಪ್ರಿಯತಮ ಹೃತಿಕ್ ರೋಷನ್
ನಟಿ ಸಬಾ ಆಜಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಾವಲಂಬಿ ಸೈಕ್ಲೋಸ್ಪೊರಾ ಕ್ಯಾಯೆಟನೆನ್ಸಿಸ್ ರೋಗನಿರ್ಣಯದ ಬಳಿಕ ಎರಡು ವಾರಗಳಲ್ಲಿ ನಾಲ್ಕು ಕೆಜಿ ತೂಕವನ್ನು ಇವರು ಕಳೆದುಕೊಂಡಿದ್ದಾರೆ.
ಶುಕ್ರವಾರ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಬಾ ಆಜಾದ್ ಈ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ತಮಗೆ ಆಸರೆಯಾಗಿರುವ ಗೆಳೆಯ ಹೃತಿಕ್ ರೋಷನ್ ಅವರನ್ನು ಕೊಂಡಾಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಇವರು ಆಸ್ಪತ್ರೆಯ ಬೆಡ್ನಲ್ಲಿ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ನನ್ನ ಜೀವನದ 14 ದಿನಗಳ ಕೆಟ್ಟ ದಿನಗಳು ಎಂದು ಇವರು ಬರೆದುಕೊಂಡಿದ್ದಾರೆ. ಮನೆಯ ಆಹಾರವನ್ನು ಸೇವಿಸಿ, ಹೋದಲ್ಲೆಲ್ಲಾ ನೀರನ್ನು ಹೊತ್ತುಕೊಂಡು ಹೋದರೂ ಸಹ, ಈ ಪರಾವಲಂಬಿಯ ಕಾಯಿಲೆಯಿಂದ ತಾನು ಬಳಲುತ್ತಿದ್ದು, ಎರಡು ವಾರಗಳಲ್ಲಿ 4 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡಿದ್ದೇನೆ ಎಂದು ಇವರು ಹೇಳಿಕೊಂಡಿದ್ದಾರೆ. ಈ ಕಠಿಣ ಸಮಯದಲ್ಲಿ ತನ್ನ ಉತ್ಸಾಹ ಹೆಚ್ಚಿಸಿದಕ್ಕಾಗಿ ಹೃತಿಕ್ ರೋಷನ್ ಅವರಿಗೆ ಇವರು ಕೃತಜ್ಞತೆ ಸಲ್ಲಿಸಿದ್ದಾರೆ.
View this post on Instagram
ಹೃತಿಕ್ ಈ ಹಿಂದೆ 2000ರಲ್ಲಿ ಸುಸ್ಸಾನ್ ಖಾನ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಹ್ರೇಹಾನ್ ಮತ್ತು ಹೃಧಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಈ ದಂಪತಿ 2014ರಲ್ಲಿ ಬೇರ್ಪಟ್ಟಿದ್ದರು. ಆದರೆ ವಿಚ್ಛೇದನದ ನಂತರವೂ ಸಹ-ಪೆÇೀಷಕತ್ವದಲ್ಲಿದ್ದಾಗ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.
ಹೃತಿಕ್ ಮತ್ತು ಸಬಾ 2022ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2025ರ ಅಕ್ಟೋಬರ್ನಲ್ಲಿ ತಮ್ಮ ಬಾಂಧವ್ಯದ ನಾಲ್ಕು ವರ್ಷವನ್ನು ಇವರು ಸಂಭ್ರಮಿಸಿದ್ದರು.



