ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ, ಹೊಸ ಚಿತ್ರಕ್ಕೆ ಹರಸಿದ ಮೋಹನ್‌ಲಾಲ್
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಮ್ಮ ಪುತ್ರಿ ವಿಸ್ಮಯ ಮೋಹನ್‌ಲಾಲ್ ಅವರಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಜೊತೆಗೆ ವಿಸ್ಮಯ ಅವರ ಮೊದಲ ಚಿತ್ರದ ಯಶಸ್ಸಿಗೂ ಹರಸಿದ್ದಾರೆ.
Happy Birthday dearest Mayakutty❤️
This year marks a beautiful new beginning… new dreams taking shape and your journey into cinema unfolding. So proud of the passion and courage you carry into everything you do.
Here’s to a year where the world sees your light.
Love,
Acha pic.twitter.com/zuKqcPKxuF— Mohanlal (@Mohanlal) March 27, 2026
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಮೋಹನ್ ಲಾಲ್, `ಪ್ರಿಯ ಮಾಯಾಕುಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು. ಈ ವರ್ಷವು ಸುಂದರವಾದ ಹೊಸ ಆರಂಭವನ್ನು ಸೂಚಿಸುತ್ತದೆ. ಹೊಸ ಕನಸುಗಳು ರೂಪುಗೊಳ್ಳುತ್ತಿವೆ ಮತ್ತು ನಿಮ್ಮ ಸಿನಿಮಾ ಪ್ರಯಾಣವು ತೆರೆದುಕೊಳ್ಳುತ್ತಿದೆ. ನೀವು ಮಾಡುವ ಪ್ರತಿಯೊಂದು ವಿಷಯದಲ್ಲೂ ತೋರುತ್ತಿರುವ ಉತ್ಸಾಹ ಹಾಗೂ ಧೈರ್ಯದ ಬಗ್ಗೆ ತುಂಬಾ ಹೆಮ್ಮೆ ಇದೆ’ ಎಂದು ಬರೆದುಕೊಂಡಿದ್ದಾರೆ.
ವಿಸ್ಮಯ ಅವರು ತಮ್ಮ ಪ್ರಥಮ ಚಿತ್ರದ ಉತ್ಸಾಹದಲ್ಲಿದ್ದಾರೆ. ತುಡಕ್ಕಂ ಎಂಬ ಚಿತ್ರದ ಮೂಲಕ ಇವರು ನಾಯಕಿಯಾಗುತ್ತಿದ್ದಾರೆ. 2018 : ಎವೆರಿಒನ್ ಈಸ್ ಎ ಹೀರೋ ಚಿತ್ರದ ನಿರ್ದೇಶಕ ಜೂಡ್ ಅಂಥನಿ ಜೋಸೆಫ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಓಣಂ ಹಬ್ಬದ ವೇಳೆ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

