Bollywood

ತೆರೆಯಲ್ಲಿ ಸಂಜಯ್ ದತ್‌ರನ್ನು ಕಂಡಾಗ ಪತಿಯನ್ನೇ ನೋಡಿದ ಹಾಗೆ ಆಯ್ತು! : ಪಾಕಿಸ್ತಾನದ ಪೊಲೀಸ್ ಅಧಿಕಾರಿಯ ಪತ್ನಿಯ ಮೆಚ್ಚುಗೆ!

ಆದಿತ್ಯ ಧರ್ ನಿರ್ದೇಶನದ ಸ್ಫೈ ಥ್ರಿಲ್ಲರ್ ಧುರಂಧರ್ ಸರಣಿಯಲ್ಲಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಾಂ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂಜಯ್ ಪಾತ್ರವನ್ನು ನಿರ್ವಹಿಸಿದ ಪರಿಗೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಸ್ವತಃ ಪಾಕಿಸ್ತಾನದ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಾಂ ಪತ್ನಿ ನೌರೀನ್ ಅಸ್ಲಾಂ ಕೂಡಾ ಸಂಜಯ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಒಂದು ದೃಶ್ಯದಲ್ಲಂತೂ ನನಗ ಪತಿ ಚೌಧರಿ ಅಸ್ಲಾಂ ಅವರನ್ನೇ ಸ್ಕ್ರೀನ್‌ ಮೇಲೆ ನೋಡಿದ ಹಾಗಾಯಿತು ಎಂದು ನೌರೀನ್ ಹೇಳಿಕೊಂಡಿದ್ದಾರೆ.

ಆಜ್‌ತಕ್ ರೇಡಿಯೊದೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ನೌರೀನ್ ತನ್ನ ಪತಿ ಚೌಧರಿ ಅಸ್ಲಾಂ ಪಾತ್ರಕ್ಕೆ ಸಂಜತ್‌ ದತ್ ಪರಿಪೂರ್ಣ ಆಯ್ಕೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಈ ಚಿತ್ರದಲ್ಲಿ ತನ್ನ ಪತಿಯ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲಾಗಿಲ್ಲ ಅಥವಾ ಆಳವಾಗಿ ತೋರಿಸಲಾಗಿಲ್ಲ ಎಂದೂ ನೌರೀನ್ ಹೇಳಿಕೊಂಡಿದ್ದಾರೆ. ಸಿನಿಮಾ ಮಾಡುವಾಗ ನನ್ನನ್ನು, ಪೊಲೀಸರನ್ನು ಅಥವಾ ಪತ್ರಕರ್ತರನ್ನು ಕರೆದು ಅವರ ಸಕಾರಾತ್ಮಕ ಮತ್ತು ನಕಾರಾತ್ಮಕ ಬದಿಗಳನ್ನು ಅರ್ಥಮಾಡಿಕೊಳ್ಳಬಹುದಿತ್ತು. ಉಳಿದ ಪೊಲೀಸರು ಎಂದಿಗೂ ಮಾಡಲಾಗದ ಕೆಲಸಗಳನ್ನು ನನ್ನ ಪತಿ ಮಾಡಿದ್ದರು ಎಂದೂ ಇವರು ಹೇಳಿಕೊಂಡಿದ್ದಾರೆ. ಜೊತೆಗೆ ಚಿತ್ರದ ಕೆಲವು ಭಾಗಗಳನ್ನು ಮಾತ್ರ ಕ್ಲಿಪ್‌ಗಳ ಮೂಲಕ ನೋಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

 

Show More

Related Articles

Leave a Reply

Your email address will not be published. Required fields are marked *

Back to top button