‘ಪೇಟ್ರಿಯಾಟ್’ ಆಕ್ಷನ್ ಚಿತ್ರದಲ್ಲಿ ಜೊತೆಯಾದ ಮಮ್ಮುಟ್ಟಿ-ಮೋಹನ್ ಲಾಲ್ : ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್
ಮಾಲಿವುಡ್ ಸೂಪರ್ ಸ್ಟಾರ್ಗಳಾದ ಮಮ್ಮುಟ್ಟಿ ಹಾಗೂ ಮೋಹನ್ ಲಾಲ್ ದೀರ್ಘ ಅಂತರದ ನಂತರ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಪೇಟ್ರಿಯಾಟ್’ ಎಂಬ ಆಕ್ಷನ್ ಚಿತ್ರದಲ್ಲಿ ಇವರಿಬ್ಬರು ಅಭಿನಯಿಸಿದ್ದು, 2026ರ ಮೇ 1ರಂದು ಈ ಸಿನಿಮಾ ತೆರೆಗೆ ಬರಲಿದೆ. ಈ ಮೊದಲು ಈ ಸಿನಿಮಾವನ್ನು ಏಪ್ರಿಲ್ 23ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಈ ದಿನವನ್ನು ಬದಲಾಯಿಸಿ ಮೇ 1 ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ.
ಚಿತ್ರದ ಹೊಸ ರಿಲೀಸ್ ಡೇಟ್ ಬಗ್ಗೆ ಸ್ವತಃ ಮಮ್ಮುಟ್ಟಿ ಹಾಗೂ ಮೋಹನ್ ಲಾಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
#Patriot In Cinemas Worldwide from May 01 , 2026 pic.twitter.com/3RK5ByAZ7k
— Mammootty (@mammukka) April 1, 2026
#Patriot In Cinemas Worldwide from May 01, 2026 pic.twitter.com/MR7sq8qU9I
— Mohanlal (@Mohanlal) April 1, 2026
‘ಪೇಟ್ರಿಯಾಟ್’ ಗುಪ್ತಚರ ಕಾರ್ಯಾಚರಣೆಯನ್ನು ಆಧರಿಸಿದ ಸ್ಪೈ ಆಕ್ಷನ್ ಚಿತ್ರವಾಗಿದ್ದು, ಸುಮಾರು ಹತ್ತು ವರ್ಷಗಳ ಬಳಿಕ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಅವರನ್ನು ಈ ಚಿತ್ರ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ.

