Bollywood

Sara Arjun : ಮಧುಬಾಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ `ಧುರಂಧರ್ ಬೆಡಗಿ’ ಸಾರಾ ಅರ್ಜುನ್?

ಬಾಲನಟಿಯಾಗಿ ಸಿನಿಮಾ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಾರಾ ಅರ್ಜುನ್ ಈಗ ಎಲ್ಲರ ಮನೆ ಮಾತಾಗಿದ್ದಾರೆ. ಕಾರಣ `ಧುರಂಧರ್’ ಮತ್ತು `ಧುರಂಧರ್: ದಿ ರಿವೆಂಜ್’ ಯಶಸ್ಸು. ಧುರಂಧರ್ ಸಾರಾ ಅರ್ಜುನ್ ಬಾಳಿನಲ್ಲಿ ದೊಡ್ಡ ಬ್ರೇಕ್ ಚಿತ್ರವೂ ಹೌದು. ಇದೀಗ ಇದೇ ನಟಿ ಮತ್ತೊಂದು ದೊಡ್ಡ ಪ್ರಾಜೆಕ್ಟ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ.

ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬುವುದಾದರೆ ಭಾರತೀಯ ಚಿತ್ರರಂಗದ ಅತ್ಯಂತ ಸುಂದರಿ ಹಾಗೂ ದಂತಕಥೆಗಳಲ್ಲಿ ಒಬ್ಬರಾದ ಮಧುಬಾಲಾರ ಪಾತ್ರವನ್ನು ಸಾರಾ ನಿರ್ವಹಿಸಲಿದ್ದಾರೆ. ಜಸ್ಮೀತ್ ಕೆ ರೀನ್ ನಿರ್ದೇಶನದ ಮತ್ತು ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಮಧುಬಾಲಾ ಬಯೋಪಿಕ್‍ನಲ್ಲಿ ಮಧುಬಾಲಾ ಪಾತ್ರಕ್ಕೆ ಸಾರಾ ಅರ್ಜುನ್ ಹೆಸರು ಕೇಳಿ ಬರುತ್ತಿದೆ.

Image Courtesy : wikipedia

ಹಾಗಂತ ಈ ಪಾತ್ರಕ್ಕೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಸಾರಾ ಮೊದಲಿಗರೇನೂ ಅಲ್ಲ, ಯಾಕೆಂದರೆ ಈ ಹಿಂದೆ ಇದೇ ಪಾತ್ರಕ್ಕೆ ಕಿಯಾರಾ ಅಡ್ವಾಣಿ, ಸಾಯಿ ಪಲ್ಲವಿ, ಅನೀತ್ ಪಡ್ಡಾ ಅವರಂತಹ ನಟಿಯರ ಹೆಸರೂ ಇಲ್ಲಿ ಕೇಳಿ ಬಂದಿತ್ತು. ಆದರೂ ಇತ್ತೀಚೆಗೆ ಧುರಂಧರ್ ಚಿತ್ರದಲ್ಲಿನ ಅಭಿನಯದ ಮೂಲಕ ಗಮನ ಸೆಳೆದ ಸಾರಾ ಅರ್ಜುನ್ ಅವರನ್ನು ನಿರ್ಮಾಪಕರು ಆಯ್ಕೆ ಮಾಡಿದ್ದಾರೆ ಎನ್ನುವುದು ಸುದ್ದಿ. ಸದ್ಯ ಈ ಪ್ರಾಜೆಕ್ಟ್ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

 

View this post on Instagram

 

A post shared by Sara Arjun (@saraarjunn)


ಈ ಬಗ್ಗೆ ಸಾರಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಒಂದೊಮ್ಮೆ ಈ ಸುದ್ದಿ ನಿಜವೇ ಆದರೆ ಸಾರಾ ಅರ್ಜುನ್‍ಗೆ ಒಂದು ಪ್ರಮುಖ ತಿರುವು ಸಿಗಬಹುದು.

ಮಧುಬಾಲಾ ಭಾರತೀಯ ಚಿತ್ರರಂಗದ ದಂತಕಥೆಗಳಲ್ಲಿ ಒಬ್ಬರು. ಅಪ್ರತಿಮ ಸುಂದರಿ ಇವರು. ಮಧುಬಾಲಾ 1950ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರಾಗಿದ್ದರು. ತಮ್ಮ ಎರಡು ದಶಕಗಳ ವೃತ್ತಿಜೀವನದಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡರು.

Show More

Related Articles

Leave a Reply

Your email address will not be published. Required fields are marked *

Back to top button