Bollywood

ಬಾಲನಟಿಯಿಂದ ಧುರಂಧರ್ ನಾಯಕಿಯ ತನಕ : ಯಾರು ಈ ಸಾರಾ ಅರ್ಜುನ್…?

ಧುರಂಧರ್ ಚಿತ್ರ ಸರಣಿ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಧುರಂಧರ್ 2 ` ಧುರಂಧರ್: ದಿ ರಿವೆಂಜ್’ ಕೂಡಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಗಮನ ಸೆಳೆದವರಲ್ಲಿ ನಾಯಕಿ ಸಾರಾ ಅರ್ಜುನ್ ಕೂಡಾ ಒಬ್ಬರು. ರಣವೀರ್ ಸಿಂಗ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿರುವ ಯುವ ನಟಿ ತಮ್ಮ ಆತ್ಮವಿಶ್ವಾಸದ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಬಂದಿದ್ದ ಸಾರಾ ಅರ್ಜುನ್ ಬಳಿಕ ಜಾಹೀರಾತು ಸೇರಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಈಗ ನಾಯಕಿಯಾಗಿ ಜನಮನ್ನಣೆ ಗಳಿಸಿದ್ದಾರೆ. ನಟ ರಾಜ್ ಅರ್ಜುನ್ ಅವರ ಪುತ್ರಿ ಸಾರಾ ಅರ್ಜುನ್.

 

View this post on Instagram

 

A post shared by Sara Arjun (@saraarjunn)


ಜಾಹೀರಾತು ಮೂಲಕ ಜರ್ನಿ
ಚಲನಚಿತ್ರಕ್ಕಿಂತ ಮುಂಚೆ ಜಾಹೀರಾತಿನಲ್ಲಿ ಸಾರಾ ಕಾಣಿಸಿಕೊಂಡಿದ್ದರು. ಇವರಿಗೆ ಐದು ವರ್ಷ ತುಂಬುವಾಗ ಇವರು 100 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಇವರ ನಟನಾ ವೃತ್ತಿಯನ್ನು ರೂಪಿಸಿತ್ತು.

ಜನಪ್ರಿಯತೆ ತಂದ `ದೈವ ತಿರುಮಗಲ್’
2011ರಲ್ಲಿ ಎ. ಎಲ್. ವಿಜಯ್ ನಿರ್ದೇಶನದ `ದೈವ ತಿರುಮಗಲ್‘ ಚಿತ್ರದ ಮೂಲಕ ಇವರು ಸಿನಿಲೋಕಕ್ಕೆ ಕಾಲಿಟ್ಟಿದ್ದರು. ಇಲ್ಲಿ ವಿಕ್ರಮ್ ಅವರ ಮಗಳು ನೀಲಾಳ ಪಾತ್ರದಲ್ಲಿ ಇವರು ತೋರಿದ ಮನೋಜ್ಞ ಅಭಿನಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಪಾತ್ರ ಸಾರಾ ಅವರಿಗೆ ಹಲವು ಪ್ರಶಸ್ತಿಗಳನ್ನೂ ತಂದಿತ್ತು. ಆಗ ಇವರಿಗೆ ಆರು ವರ್ಷ.

ಬಾಲಿವುಡ್‍ಗೆ ಪ್ರವೇಶ
2013ರಲ್ಲಿ ‘ಏಕ್ ಥಿ ದಾಯನ್’ ಚಿತ್ರದ ಮೂಲಕ ಬಾಲಿವುಡ್‍ಗೆ ಇವರು ಪ್ರವೇಶಿಸಿದರು. ಇಮ್ರಾನ್ ಹಶ್ಮಿ ಅವರೊಂದಿಗೆ ನಟಿಸಿದ ಅವರು ಮಿಶಾ ಪಾತ್ರವನ್ನು ನಿರ್ವಹಿಸಿದರು.

‘ಪೊನ್ನಿಯಿನ್ ಸೆಲ್ವನ್’
ದಕ್ಷಿಣ ಭಾರತದ ಮತ್ತೊಂದು ಬಿಗ್ ಬಜೆಟ್ ಸಿನಿಮಾ ‘ಪೊನ್ನಿಯಿನ್ ಸೆಲ್ವನ್‘ನಲ್ಲೂ ಸಾರಾ ಅಭಿನಯಿಸಿದ್ದರು.. ಐಶ್ವರ್ಯಾ ರೈ ಬಚ್ಚನ್ ನಿರ್ವಹಿಸಿದ್ದ ಪಾತ್ರದ ಬಾಲ್ಯದ ರೂಪವನ್ನು ಇವರು ನಿರ್ವಹಿಸಿದ್ದರು. ಇದು ಇವರಿಗೆ ಇನ್ನಷ್ಟು ಬ್ರೇಕ್ ತಂದುಕೊಟ್ಟಿತ್ತು.

ಧುರಂಧರ್‌ನಲ್ಲಿ ಪ್ರಮುಖ ಪಾತ್ರ
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸರಣಿ ಸಾರಾ ಅರ್ಜುನ್‍ಗೆ ಇನ್ನಷ್ಟು ಖ್ಯಾತಿ ತಂದು ಕೊಟ್ಟ ಚಿತ್ರ. ಇಲ್ಲಿ ಯಲಿನಾ ಜಮಾಲಿ ಪಾತ್ರವನ್ನು ಸಾರಾ ನಿರ್ವಹಿಸಿದ್ದಾರೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಅವರಂತಹ ನಟರೊಂದಿಗೆ ಸ್ಕ್ರೀನ್ ಹಂಚಿಕೊಂಡು ಇವರು ಗಮನ ಸೆಳೆದಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button