Bollywood
ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ-ರಣವೀರ್
ಬಾಲಿವುಡ್ನ ತಾರಾ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಹೆಣ್ಣು ಮಗು ದುವಾ ಜನಿಸಿದ ಎರಡು ವರ್ಷಗಳ ಬಳಿಕ ಈ ದಂಪತಿ ಮತ್ತೊಮ್ಮೆ ಪೋಷಕರಾಗುತ್ತಿರುವುದನ್ನು ಘೋಷಿಸಿದೆ. ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ದಂಪತಿ ಈ ಸಂಗತಿ ಹಂಚಿಕೊಂಡಿದ್ದಾರೆ.
2024ರ ಸೆಪ್ಟೆಂಬರ್ 8ರಂದು ಈ ದಂಪತಿ ಮೊದಲ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಇದೀಗ ಇವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಉದ್ಯಮದ ತಾರೆಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
View this post on Instagram
ದೀಪಿಕಾ ಮತ್ತು ರಣವೀರ್ ನವೆಂಬರ್ 14, 2018 ರಂದು ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಖಾಸಗಿ ಮತ್ತು ಅದ್ದೂರಿ ಸಮಾರಂಭದಲ್ಲಿ ವಿವಾಹವಾದರು. ಈ ವಿವಾಹವು ಕೊಂಕಣಿ ಮತ್ತು ಸಿಂಧಿ ಸಂಪ್ರದಾಯಗಳಂತೆ ನಡೆದಿತ್ತು.



