News Roundup
ನಥಿಂಗ್ನ ಬೆಂಗಳೂರು ಮಳಿಗೆಗೆ ಆರ್ಸಿಬಿ ಆಟಗಾರರ ಭೇಟಿ

ಬೆಂಗಳೂರಿನ ನಥಿಂಗ್ಸ್ ಮಳಿಗೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪ್ರಮುಖ ಆಟಗಾರರು ಭೇಟಿ ನೀಡಿದರು. ಲಂಡನ್ ಮೂಲದ ತಂತ್ರಜ್ಞಾನ ಸಂಸ್ಥೆ ನಥಿಂಗ್ 2026ರ ಟಿ20 ಕ್ರಿಕೆಟ್ ಸರಣಿಗೆ ಆರ್ಸಿಬಿ ತಂಡದ ಟೈಟಲ್ ಸ್ಪಾನ್ಸರ್ ಆಗಿದೆ.

ತಂಡದ ವೇಗಿಗಳಾದ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್ ಹಾಗೂ ರೊಮಾರಿಯೋ ಶೆಫರ್ಡ್ ಮತ್ತು ಜೇಕಬ್ ಬೆಥೆಲ್ ಮಳಿಗೆಗೆ ಆಗಮಿಸಿ ಮಳಿಗೆಯಲ್ಲಿದ್ದ ಗ್ಯಾಜೆಟ್ ಗಳನ್ನು ವೀಕ್ಷಿಸಿದರು. ಜೊತೆಗೆ ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು. ಜೊತೆಗೆ ಗಾಜಿನ ಕಿಟಕಿಯ ಮೇಲೆ ಗ್ರಾಫಿಟಿ ಶೈಲಿಯಲ್ಲಿ “RCB was here” ಎಂದು ಬರೆಯುವ ಮೂಲಕ ಭೇಟಿಯ ನೆನಪಿನ್ನು ಆಟಗಾರರು ಶಾಶ್ವತವಾಗಿಸಿದರು.



