ಹಿಂದೂ ಧರ್ಮದಲ್ಲಿ ತಿಲಕ ಇಡುವ ಮಹತ್ವ

ಹಿಂದೂ ಧರ್ಮದಲ್ಲಿ ತಿಲಕಕ್ಕೆ ಸಾಕಷ್ಟು ಮಹತ್ವವಿದೆ. ಹಣೆಯ ಮೇಲೆ ಕುಂಕುಮ, ವಿಭೂತಿ ಅಥವಾ ಶ್ರೀಗಂಧವನ್ನು ಹಚ್ಚುವುದು ನಮ್ಮ ಸಂಸ್ಕೃತಿಯ ಭಾಗ. ಇದಕ್ಕೆ ಸಾಕಷ್ಟು ಆಳವಾದ ಅರ್ಥ, ಕಾರಣ ಕೂಡಾ ಇದೆ.
ಹಣೆಯನ್ನು, ವಿಶೇಷವಾಗಿ ಹುಬ್ಬಗಳ ನಡುವನ್ನು ಮನುಷ್ಯನ ದೇಹದ ಅತ್ಯಂತ ಶಕ್ತಿಶಾಲಿ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಈ ಜಾಗವನ್ನು ಆಜ್ಞಾ ಚಕ್ರ ಎಂದು ಕರೆಯಲಾಗುತ್ತದೆ. ಇದು ಒಬ್ಬರ ಅಂತಃಪ್ರಜ್ಞೆ, ಆಂತರಿಕ ಬುದ್ಧಿವಂತಿಕೆ, ಆಧ್ಯಾತ್ಮಿಕ ಒಳನೋಟವನ್ನು ನಿಯಂತ್ರಿಸುತ್ತದೆ.
ಒಂದು ನಿರ್ದಿಷ್ಟ ಬಿಂದುವಿನ ಮೇಲೆ ತಿಲಕವನ್ನು ಇರಿಸುವುದರಿಂದ ಒಬ್ಬರ ಆಜ್ಞಾ ಚಕ್ರವನ್ನು ಸಕ್ರಿಯಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಕುಂಕುಮ, ಶ್ರೀಗಂಧ ಅಥವಾ ಭಸ್ಮದಿಂದ ಕೂಡಿದ ತಿಲಕವನ್ನು ಈ ಸ್ಥಳಕ್ಕೆ ಹಚ್ಚಿದಾಗ ಒಬ್ಬರ ಜೀವನದಲ್ಲಿ ಮಾನಸಿಕ ಶಾಂತಿಯನ್ನು ತರುತ್ತದೆ ಎನ್ನಲಾಗುತ್ತದೆ.
ನಿಯಮಿತವಾಗಿ ತಿಲಕವನ್ನು ಹಾಕುವುದು ಅವರ ಜೀವನದಲ್ಲಿ ಆಧ್ಯಾತ್ಮಿಕತೆಯ ಭಾವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎನ್ನುವ ನಂಬಿಕೆಯೂ ಇದೆ.
ತಿಲಕವನ್ನು ರಕ್ಷಣೆ ಮತ್ತು ಪರಿಶುದ್ಧತೆಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಜೊತೆಗೆ ಇದು ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಕಣ್ಣುಗಳನ್ನು ನಿಮ್ಮಿಂದ ದೂರವಿಡುವ ರಕ್ಷಾ ಕವಚ ಎಂಬ ನಂಬಿಕೆಯೂ ನಮ್ಮಲ್ಲಿದೆ
ಶ್ರೀಗಂಧದ ತಿಲಕ ಹಚ್ಚುವ ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಶ್ರೀಗಂಧ ತಂಪಾಗಿಸುವ ಮತ್ತು ಶಾಂತಗೊಳಿಸುವ ಸ್ವಭಾವವನ್ನು ಹೊಂದಿದೆ. ಹೀಗಾಗಿ ಇದನ್ನು ನೀವು ಹಣೆಗೆ ಹಚ್ಚಿಕೊಂಡಾಗ ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ ಎಂದೂ ಹೇಳಲಾಗುತ್ತದೆ.
ಇದು ಒಬ್ಬರನ್ನು ಶಾಂತವಾಗಲು ಸಹಾಯ ಮಾಡುತ್ತದೆ. ಒತ್ತಡದ ಸಂದರ್ಭಗಳಲ್ಲಿ ಅಥವಾ ದೈನಂದಿನ ಪ್ರಾರ್ಥನೆಯನ್ನು ಆರಂಭಿಸುವ ಮುನ್ನ ಶಾಂತವಾಗಿರಲು ಹಾಗೂ ನಿಮ್ಮ ಮನಸ್ಸನ್ನು ಗೊಂದಲಗಳಿಂದ ಮುಕ್ತವಾಗಿರಿಸಲು ಇದು ನೆರವಾಗುತ್ತದೆ.



