ಧುರಂಧರ್ ಸಕ್ಸಸ್ : ರಾಕೇಶ್ ಬೇಡಿ ಅವರಿಗೆ ಸಿಕ್ಕಿತಾ 1 ಕೋಟಿ ರೂಪಾಯಿ ಬೋನಸ್: ಹರಿದಾಡುತ್ತಿದೆ ಸುದ್ದಿ
ಧುರಂಧರ್ ಸರಣಿಯಲ್ಲಿ ಎಲ್ಲರ ಗಮನ ಸೆಳೆದ ನಟರಲ್ಲಿ ರಾಕೇಶ್ ಬೇಡಿ ಕೂಡಾ ಒಬ್ಬರು. ತಮ್ಮ ವಿಶಿಷ್ಟ ಬಾಡಿ ಲ್ಯಾಂಗ್ವೇಜ್, ಟೈಮಿಂಗ್, ಡೈಲಾಗ್ ಡೆಲಿವರಿ ಮೂಲಕ ಇವರು ಇಷ್ಟವಾಗುತ್ತಿದ್ದರು. ಈ ಸರಣಿ ರಾಕೇಶ್ ಬೇಡಿ ಅವರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.
ಆದರೆ ಇದೀಗ ನಿರ್ದೇಶಕ, ನಿರ್ಮಾಪಕ ಆದಿತ್ಯ ಧಾರ್ ಅವರು ಧುರಂಧರ್ (2025) ಮತ್ತು ಧುರಂಧರ್ ದಿ ರಿವೆಂಜ್ (2026) ಚಿತ್ರಗಳ ಭರ್ಜರಿ ಯಶಸ್ಸಿನ ಖುಷಿಯಲ್ಲಿ ಇರುವ ರಾಕೇಶ್ ಬೇಡಿ ಅವರಿಗೆ ಒಂದು ಕೋಟಿ ರೂಪಾಯಿ ಚೆಕ್ ನೀಡುವ ಮೂಲಕ ಸಿನಿಮಾದ ಯಶಸ್ಸಿಗೆ ಅವರು ನೀಡಿದ ಕೊಡುಗೆಯನ್ನು ಸಂಭ್ರಮಿಸಿದ್ದಾರೆ ಎಂದು ಸುದ್ದಿ ಹಬ್ಬಿದೆ.
ಈ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ತಿಳಿದಿಲ್ಲ. ಆದರೆ ಸದ್ಯ ಒಂದು ಕೋಟಿ ರೂಪಾಯಿಯ ಬೋನಸ್ ಅನ್ನು ರಾಕೇಶ್ ಬೇಡಿ ಅವರಿಗೆ ನೀಡಲಾಗಿದೆ ಎಂದು ಸುದ್ದಿ ಹರಿದಾಡುತ್ತಿರುವುದಂತೂ ಸತ್ಯ. ಆದರೆ ಈ ಬಗ್ಗೆ ನಿರ್ದೇಶಕ ಆದಿತ್ಯ ಧರ್ ಆಗಲಿ ಅಥವಾ ರಾಕೇಶ್ ಬೇಡಿ ಅವರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.
ಈ ಸರಣಿಯಲ್ಲಿ ರಾಕೇಶ್ ಬೇಡಿ ಅವರು ರಾಜಕಾರಣಿ ಜಮೀಲ್ ಜಮಾಲಿ ಪಾತ್ರ ನಿರ್ವಹಿಸಿದ್ದರು.



