R Madhavan Sends Legal Notice : ಅನುಮತಿ ಇಲ್ಲದೆ ಪ್ರಚಾರಕ್ಕೆ ತನ್ನ ಹೆಸರು ಬಳಕೆ : ಸಂಸ್ಥೆಗೆ ಲೀಗಲ್ ನೋಟೀಸ್ ಕಳುಹಿಸಿದ ಆರ್ ಮಾಧವನ್
ಬಹುಭಾಷಾ ನಟ ಆರ್ ಮಾಧವನ್ ಆರೋಗ್ಯ ಸೇವಾ ಬ್ರ್ಯಾಂಡ್ ವಿರುದ್ಧ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ತನ್ನ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಈ ಸಂಸ್ಥೆ ತಮ್ಮ ಹೆಸರು ಹಾಗೂ ಕ್ಲಿಪ್ ಬಳಸಿಕೊಂಡಿದ್ದಕ್ಕೆ ಕೆಂಡಾಮಂಡಲರಾಗಿರುವ ಮಾಧವನ್ ಈ ಬಗ್ಗೆ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಕಿಡಿಕಾರಿದ್ದಾರೆ.
`ಈ ರೀಲ್ ನಾನು ಅವರ ಉತ್ಪನ್ನವನ್ನು ಅನುಮೋದಿಸುತ್ತಿದ್ದೇನೆ ಎಂದು ಧ್ವನಿಸುತ್ತಿದೆ. ಅವರು ಯಾವುದೇ ಅನುಮತಿಯಿಲ್ಲದೆ ಸಂದರ್ಶನದ ಕ್ಲಿಪ್ ಅನ್ನು ತೆಗೆದುಕೊಂಡು ಅದನ್ನು ನನ್ನ ಕಡೆಯಿಂದ ಅನುಮೋದನೆಯಾಗಿ ಬಳಸಿದ್ದಾರೆ. ಈ ಜನರನ್ನು ಅಥವಾ ಅವರ ನಡವಳಿಕೆಯನ್ನು ಸಾರ್ವಜನಿಕರು ಹೇಗೆ ನಂಬುತ್ತಾರೆ? !!!! ನಾಚಿಕೆಗೇಡು’ ಎಂದು ಬರೆದುಕೊಂಡಿರುವ ಮಾಧವನ್ ಈ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಲೀಗಲ್ ನೋಟೀಸ್ ಕಳುಹಿಸಿದ್ದಾಗಿಯೂ ಹೇಳಿದ್ದಾರೆ.
ಈಗ ಈ ರೀಲ್ ಅನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ ಮಾಧವನ್ ಅವರ ಹಳೆಯ ಸಂದರ್ಶನದ ಕ್ಲಿಪ್ ಅನ್ನು ಬಳಸಲಾಗಿದೆ. ಈ ವಿಡಿಯೋದಲ್ಲಿ ವೈದ್ಯ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಮಾಧವನ್ ಅವರ ರೂಪಾಂತರದ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಮಾಧವನ್ ಈ ಹಿಂದಿನ ತಮ್ಮ ಸಂದರ್ಶನದಲ್ಲಿ ಫಿಟ್ನೆಸ್ ಮತ್ತು ತೂಕ ನಿರ್ವಹಣೆಗೆ ತಮ್ಮ ನೈಸರ್ಗಿಕ, ಸ್ವಯಂ-ನಿರ್ದೇಶಿತ ವಿಧಾನ ಬಗ್ಗೆ ಮಾತನಾಡಿದರು. ಈ ಕ್ಲಿಪ್ ಅನ್ನು ಬ್ರ್ಯಾಂಡ್ ಬಳಸಲಾಗಿದೆ ಎಂದು ಹೇಳಲಾಗಿದೆ.



