ಬಾಲಿವುಡ್ ಹಿರಿಯ ನಟರ ಫಿಟ್ನೆಸ್ : ಅನುಪಮ್ ಖೇರ್, ನಾನಾ ಪಟೇಕರ್ ವಿಡಿಯೋಗೆ ನೆಟ್ಟಿಗರು ಫಿದಾ
ಬಾಲಿವುಡ್ ಹಿರಿಯ ನಟರಾದ ಅನುಪಮ್ ಖೇರ್ ಹಾಗೂ ನಾನಾ ಪಾಟೇಕರ್ ಅವರ ಫಿಟ್ನೆಸ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಯಸ್ಸು ಎನ್ನುವುದು ಬರೀ ಸಂಖ್ಯೆ ಎಂಬುದನ್ನು ಇಬ್ಬರೂ ನಟರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಇಬ್ಬರು ವರ್ಕೌಟ್ ಮಾಡುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ನಟ ಅನುಪಮ್ ಖೇರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುವ ವಿಡಿಯೋವೊಂದು ಹಂಚಿಕೊಂಡಿದ್ದಾರೆ. `ವ್ಯಾಯಾಮವು ನನ್ನ ದೇಹವನ್ನು ಬಲಪಡಿಸುವುದಿಲ್ಲ, ಅದು ನನ್ನ ಮನಸ್ಸನ್ನು ಕೇಂದ್ರೀಕರಿಸುತ್ತದೆ’ ಎಂದು ಅನುಪಮ್ ಖೇರ್ ಬರೆದುಕೊಂಡಿದ್ದಾರೆ. ಈ ರೀಲ್ಗೆ ಹಿನ್ನಲೆಯಲ್ಲಿ ಗಾಯಕ ಶಂಕರ್ ಮಹಾದೇವನ್ ಅವರ ಶಿವ ತಾಂಡವ ಸ್ತೋತ್ರವನ್ನೂ ಬಳಸಲಾಗಿದೆ.
ಮತ್ತೊಂದು ಕಡೆ ಮತ್ತೊರ್ವ ಹಿರಿಯ ನಟ ನಾನಾ ಪಾಟೇಕರ್ ಕೂಡಾ ವ್ಯಾಯಾಮದ ಮೂಲಕ ಗಮನ ಸೆಳೆದಿದ್ದಾರೆ. ಛಾಯಾಗ್ರಾಹಕ ಮತ್ತು ನಿರ್ಮಾಪಕ ಅತುಲ್ ಕಸ್ಬೇಕರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾನಾ ಪಾಟೇಕರ್ ಅವರು ಸತತ 15 ಟ್ರೈಸೆಪ್ ಡಿಪ್ಸ್ ಮಾಡುತ್ತಿರುವ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.



