Bollywood
`ಪ್ರೊಪೊಗಾಂಡ ಫಿಲಂ’ ಆದರೆ ತಪ್ಪೇನು? : ಧುರಂಧರ್ ಚಿತ್ರವನ್ನು ಮೆಚ್ಚಿದ ಜಾವೇದ್ ಅಖ್ತರ್
ಬಾಲಿವುಡ್‌ನ ಹಿರಿಯ ಗೀತೆ ರಚನಕಾರ, ಚಿತ್ರಕಥೆಗಾರ ಜಾವೇದ್ ಅಖ್ತರ್ ಧುರಂಧರ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ `ಪ್ರೊಪೊಗಾಂಡ ಫಿಲಂ’ ಎಂಬ ಟೀಕೆಗೆ ಉತ್ತರಿಸಿದ ಅವರು ಎಲ್ಲರಿಗೂ ಅವರ ವಿಚಾರಗಳನ್ನು ಪ್ರಚಾರ ಮಾಡುವ ಹಕ್ಕು ಇದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದ ಆಭರಣದ ಬ್ರ್ಯಾಂಡ್ ನೀಡುವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಯಾವ ಅರ್ಥದಲ್ಲಿ `ಪ್ರೊಪೊಗಾಂಡ ಫಿಲಂ’ ಎಂದು ನನಗೆ ತಿಳಿದಿಲ್ಲ. ನನಗೆ ಧುರಂಧರ್ ತುಂಬಾ ಇಷ್ಟವಾಯಿತು. ಇದು ಅತ್ಯುತ್ತಮ ಚಿತ್ರವಾಗಿತ್ತು. ಮೊದಲನೆಯದನ್ನು ಎರಡನೆಯದಕ್ಕಿಂತ ಹೆಚ್ಚು ಇಷ್ಟಪಟ್ಟೆ ಎಂದು ಅವರು ಹೇಳಿದ್ದಾರೆ.
ಪ್ರೊಪೊಗಾಂಡ ಫಿಲಂಗಳಲ್ಲಿ ಏನು ತಪ್ಪಾಗಿದೆ? ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕನ ಕಾರ್ಯವೆಂದರೆ ಸತ್ಯವನ್ನು ಪ್ರಸ್ತುತಪಡಿಸುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.



