BollywoodSandalwood
ಬಾಲಿವುಡ್ಗೆ ಹಾರಿದ ರಾಜ್ ಬಿ ಶೆಟ್ಟಿ

`ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಕಂಡ ರಾಜ್ ಬಿ ಶೆಟ್ಟಿ ಈಗ ಏರಿದ ಎತ್ತರ ದೊಡ್ಡದು. ವಿಭಿನ್ನ ಕಥಾ ಹಂದರದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಾಜ್ ತಮ್ಮ ಕೆಲಸದ ಮೂಲಕವೇ ಬೇರೆ ಚಿತ್ರರಂಗದವರನ್ನೂ ಸೆಳೆದಿದ್ದಾರೆ. ಈಗಾಗಲೇ ಮಲಯಾಳಂ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಜ್ ಅವರು ಈಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುನಿರೀಕ್ಷಿತ ಚಿತ್ರ ‘ಬಂದರ್’ ಚಿತ್ರದಲ್ಲಿ ರಾಜ್ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ನಲ್ಲಿ ರಾಜ್ ಕಾಣಿಸಿಕೊಂಡಿದ್ದಾರೆ.
`ಬಂದರ್’ ಸಿನಿಮಾದಲ್ಲಿ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತದೆ.



