Bollywood

`ಧುರಂಧರ್’ ಸಕ್ಸಸ್ ಬಗ್ಗೆ ದೀಪಿಕಾ ಮೌನ : ಕೊನೆಗೂ ಪ್ರತಿಕ್ರಿಯೆ ನೀಡಿದ ನಟಿ

ಆದಿತ್ಯ ಧರ್ ನಿರ್ದೇಶನದ ಧುರಂಧರ್: ದಿ ರಿವೆಂಜ್ ಚಿತ್ರ ತನ್ನ ಯಶಸ್ವಿ ಓಟವನ್ನು ಮುಂದುವರಿಸಿದೆ. ನಟ ರಣ್‍ವೀರ್ ಸಿಂಗ್ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿದ್ದರೂ ಪತಿಯ ಚಿತ್ರದ ಯಶಸ್ಸಿನ ಬಗ್ಗೆ ನಟಿ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಇದ್ದದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿತ್ತು ಹಾಗೂ ಟೀಕೆ, ಟ್ರೋಲ್‍ಗೂ ಗುರಿಯಾಗಿತ್ತು.

ಇದೀಗ ದೀಪಿಕಾ ಈ ಬಗ್ಗೆ ಮೌನ ಮುರಿದಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಹಂಚಿದ್ದ ವಿಡಿಯೋವೊಂದರಲ್ಲಿ ದೀಪಿಕಾ ಪಡುಕೋಣೆ ಚಿತ್ರದ ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು, ಧುರಂಧರ್ ನಿರ್ದೇಶಕ ಆದಿತ್ಯ ಧರ್‍ಗೆ ಮಾಡಿದ ಅವಮಾನವೇ ಅಥವಾ ಸೋಶಿಯಲ್ ಮೀಡಿಯಾದ ಚರ್ಚೆಗಳಿಂದ ದೂರ ಉಳಿಯುವ ಉಳಿಯುವುದೇ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ದೀಪಿಕಾ ಪಡುಕೋಣೆ, `ನಿಮ್ಮೆಲ್ಲರಿಗಿಂತ ಮುನ್ನ ನಾನು ಚಿತ್ರವನ್ನು ನೋಡಿದ್ದೆ. ಈಗ ಹೇಳಿ, ಯಾರ ಬಗ್ಗೆ ನೀವು ತಮಾಷೆ ಮಾಡುತ್ತಿದ್ದೀರಿ? ಎಂದು ತಿರುಗೇಟು ಕೊಟ್ಟಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button