ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ತಮನ್ನಾ ಭಾಟಿಯಾ
ಬಹುಭಾಷಾ ನಟಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮುಂಜಾನೆ ಇಲ್ಲಿ ನಡೆಯುವ ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡ ಇವರು ಶಿವ ಪೂಜೆಯನ್ನು ನಡೆಸಿದರು. ತಮನ್ನಾ ಅವರೊಂದಿಗೆ ಅವರ ಸ್ನೇಹಿತೆ ಹಾಗೂ ನಿರ್ಮಾಪಕಿ ಪ್ರಜ್ಞಾ ಕಪೂರ್ ಕೂಡಾ ಇದ್ದರು.
View this post on Instagram
ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಮನ್ನಾ, ಭಸ್ಮಾರತಿಯನ್ನು ವೀಕ್ಷಿಸುವ ಅವಕಾಶ ಸಿಕ್ಕಿರುವುದು ಬದುಕಿನ ವಿಶೇಷ ಕ್ಷಣಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ.
#WATCH | Ujjain, Madhya Pradesh: Actress Tamannaah Bhatia attends ‘Bhasma Aarti’ and offers prayers at the Mahakaleshwar Temple in Ujjain. pic.twitter.com/8WFTmZbMTR
— ANI (@ANI) May 11, 2026
ಸದ್ಯ ತಮನ್ನಾ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಈಗ ಇವರು ವ್ವಾನ್ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಸ್ಕ್ರೀನ್ ಶೇರ ಮಾಡಿದ್ದು, ಈ ಸಿನಿಮಾ ಆಗಸ್ಟ್ 28 ರಂದು ಬಿಡುಗಡೆಯಾಗಲಿದೆ.



