ಬಹುವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್

ಬಾಲಿವುಡ್ನ ಆಗುಹೋಗುಗಳ ಬಗ್ಗೆ ಸದಾ ಅಪ್ಡೇಟ್ ಹೊಂದಿರುವ ಎಲ್ಲರಿಗೂ ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಬಗ್ಗೆ ಗೊತ್ತಿರುತ್ತದೆ. ಒಂದು ಕಾಲದ ಸೂಪರ್ ಹಿಟ್ ಜೋಡಿ ಇದು. ಬರೀ ತೆರೆ ಮೇಲೆ ಮಾತ್ರ ಅಲ್ಲ, ರಿಯಲ್ ಲೈಫ್ನಲ್ಲೂ ಇವರು ಒಂದಾಗಲು ಬಯಸಿದ್ದರು. ಆದರೆ ನಂತರ ಇವರಿಬ್ಬರ ನಿಶ್ಚಿತಾರ್ಥ ಮುರಿದು ಬಿದ್ದು, ಈ ಜೋಡಿ ಪರಸ್ಪರ ದೂರವಾಗಿತ್ತು…
ಇದಾಗಿ ಸಾಕಷ್ಟು ವರ್ಷ ಕಳೆದಿದೆ. ಇಬ್ಬರೂ ಅವರದ್ದೇ ಆದ ಜೀವನವನ್ನು ಕಟ್ಟಿಕೊಂಡಿದ್ದಾರೆ. ಜೊತೆಗೆ ಈಗ ಬಹುವರ್ಷಗಳ ಬಳಿಕ ಇವರಿಬ್ಬರು ತೆರೆ ಹಂಚಿಕೊಳ್ಳುತ್ತಿದ್ದಾರೆ. `ವೆಲ್ಕಮ್ ಟು ದಿ ಜಂಗಲ್’ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ಇಬರಿಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ.
ಈ ಚಿತ್ರದ ಟೀಸರ್ ಹಾಗೂ ಟೈಟಲ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಕಷ್ಟು ಜನಮನ್ನಣೆಯನ್ನೂ ಗಳಿಸಿದೆ. ಇನ್ನು ಈ ಚಿತ್ರದ 18 ದಿನಗಳ ಶೂಟಿಂಗ್ನಲ್ಲಿ ರವೀನಾ ಪಾಲ್ಗೊಂಡಿದ್ದಾರೆ. ಈ ಸಿನಿಮಾದಲ್ಲಿ ರವೀನಾ ಮಹತ್ವದ ಪಾತ್ರವನ್ನು ಹೊಂದಿದ್ದಾರೆ.
Iss jungle mein ab roar bhi hoga aur shor bhi hoga! 🕺💃🌴#WelcomeToTheJungleTitleTrack Out Now: https://t.co/EqysA9duNK #WelcomeToTheJungle, the chaos begins in cinemas from 26th June, 2026 🍿 pic.twitter.com/wbsC6Q0U22
— Akshay Kumar (@akshaykumar) May 18, 2026
ಒಂದು ಕಾಲದ ಪ್ರಸಿದ್ಧ ಆನ್ಸ್ಕ್ರೀನ್ ಜೋಡಿ ಈಗ `ವೆಲ್ಕಮ್ ಟು ದಿ ಜಂಗಲ್’ ನಲ್ಲಿ ಮತ್ತೆ ಒಂದಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. 2026ರ ಜೂನ್ 26ರಂದು ಈ ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ. ಅಹ್ಮದ್ ಖಾನ್ ನಿರ್ದೇಶನದ `ವೆಲ್ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ಅಕ್ಷಯ್ ಕುಮಾರ್, ರವೀನಾ ಟಂಡನ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ದಿಶಾ ಪಟಾನಿ, ಜಾಕ್ವೆಲಿನ್ ಫನಾರ್ಂಡಿಸ್, ಅರ್ಷದ್ ವಾರ್ಸಿ, ಉರ್ವಶಿ ರೌಟೇಲಾ, ತುಷಾರ್ ಕಪೂರ್, ಶ್ರೇಯಸ್ ತಲ್ಪಡೆ, ಅಫ್ತಾಬ್ ಶಿವದಾಸನಿ, ಪರೇಶ್ ರಾವಲ್, ಜಾನಿ ಲಿವರ್, ರಾಜ್ಪಾಲ್ ಯಾದವ್, ಕಿಕು ಸರ್ದಾ, ಕೃಷ್ಣ ಅಭಿಷೇಕ್, ಬಿಂದು ದಾರಾ ಸಿಂಗ್, ದಲೇರ್ ಮೆಹಂದಿ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ.



