ಪುತ್ರಿಗೆ ಒಂದು ವರ್ಷ : ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡ ಅಥಿಯಾ ಶೆಟ್ಟಿ, ಕೆ.ಎಲ್.ರಾಹುಲ್ ದಂಪತಿ
ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಪತ್ನಿ ಅಥಿಯಾ ಶೆಟ್ಟಿ ತಮ್ಮ ಪುತ್ರಿ ಇವಾರಾಳ ಒಂದನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಕಂದನ ಫೋಟೋ ಹಂಚಿಕೊಂಡ ಅಥಿಯಾ ಹಾಗೂ ಕೆ ಎಲ್ ರಾಹುಲ್, `ಮೊದಲ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಜಾನಾ. ನಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು, ನಾವು ನಿನ್ನನ್ನು ಪದಗಳನ್ನು ಮೀರಿ ಮತ್ತು ಪ್ರಪಂಚಗಳನ್ನು ಮೀರಿ ಪ್ರೀತಿಸುತ್ತೇವೆ’ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
View this post on Instagram
ಈ ಪೋಸ್ಟ್‌ನಲ್ಲಿ ಇವಾರಾನ ಮೊದಲ ಹುಟ್ಟುಹಬ್ಬದ ಆಚರಣೆಯ ಕೆಲವು ಝಲಕ್‍ಗಳು ಸೇರಿವೆ. ಅಥಿಯಾಳ ನಟ ಸಹೋದರ ಅಹಾನ್ ಶೆಟ್ಟಿ ಕೂಡ ಇನ್‍ಸ್ಟಾ ಸ್ಟೋರೀಸ್‍ನಲ್ಲಿ ತಮ್ಮ ಸೊಸೆಯೊಂದಿಗಿನ ಚಿತ್ರವನ್ನು ಅಪ್‍ಲೋಡ್ ಮಾಡಿದ್ದಾರೆ.
2023ರ ಜನವರಿ 23ರಂದು ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ವಿವಾಹವಾಗಿದ್ದರು. ಸುನಿಲ್ ಶೆಟ್ಟಿ ಅವರ ಖಂಡಾಲಾದ ತೋಟದ ಮನೆಯಲ್ಲಿ ವಿವಾಹ ನಡೆದಿತ್ತು. 2025ರ ಮಾರ್ಚ್ 24ರಂದು ಅಥಿಯಾ ಮತ್ತು ರಾಹುಲ್ ದಂಪತಿ ಮುದ್ದಾದ ಹೆಣ್ಣುಮಗುವನ್ನು ಸ್ವಾಗತಿಸಿದ್ದರು.



