Tollywood

ರಶ್ಮಿಕಾ ಮಂದಣ್ಣರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ

ಹೈದರಾಬಾದ್ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ `ದಿ ಗರ್ಲ್‍ಫ್ರೆಂಡ್’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ತೆಲಂಗಾಣದ ಗದ್ದರ್ ಚಲನÀಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಟರಾದ ರಾಮ್ ಚರಣ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಂದ ರಶ್ಮಿಕಾ ಪ್ರಶಸ್ತಿ ಸ್ವೀಕರಿಸಿದ್ದಾರೆ.

 

View this post on Instagram

 

A post shared by Wizcraft (@wizcraftglobal)

ತೆಲಂಗಾಣ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರಶ್ಮಿಕಾ, ಆಗ, ನಾನು ನಿಮ್ಮ ಮುಂದೆ ಮಗಳಾಗಿ ಬಂದಿದ್ದೆ. ಇಂದು, ನಾನು ನಿಮ್ಮ ಮುಂದೆ ಸೊಸೆಯಾಗಿ ನಿಂತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅತ್ತೆ ಮಾಧವಿ ದೇವರಕೊಂಡ ಅವರೊಂದಿಗೆ ಸಮಾರಂಭಕ್ಕೆ ಬಂದಿದ್ದ ರಶ್ಮಿಕಾ ಈ ಖುಷಿಯ ಕ್ಷಣಗಳನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button