Bollywood
ದಾಂಪತ್ಯಕ್ಕೆ ಕಾಲಿಟ್ಟ ಜವಾನ್ ನಟಿ ಸಂಗೀತಾ : ಬಹುಕಾಲದ ಗೆಳೆಯನೊಂದಿಗೆ ಹೊಸ ಜೀವನ
ಶಾರೂಖ್ ಖಾನ್ ಅಭಿನಯದ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಟಿಸಿದ್ದ ಸಂಗೀತಾ ಭಟ್ಟಾಚಾರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ, ಸಂಗೀತ ನಿರ್ಮಾಪಕ ರಾಗ್ ಸೇಠಿ ಅವರನ್ನು ಸಂಗೀತಾ ವರಿಸಿದ್ದಾರೆ. ಜವಾನ್ ಸಿನಿಮಾದಲ್ಲಿ ಶಾರೂಖ್ ಅವರ ಗರ್ಲ್ ಗ್ಯಾಂಗಿನಲ್ಲಿ ಒಬ್ಬರಾಗಿ ಸಂಗೀತ ಗಮನ ಸೆಳೆದಿದ್ದರು.
View this post on Instagram
ಅಪ್ಪಟ ಬಂಗಾಳಿ ವಧುವಿನಂತೆ ಸಂಗೀತಾ ಕಂಗೊಳಿಸುತ್ತಿದ್ದರು. ಈ ವಿವಾಹ ಸಮಾರಂಭದಲ್ಲಿ ಇವರೊಂದಿಗೆ ನಟಿಸಿದ್ದ ಕಲಾವಿದರೂ ಪಾಲ್ಗೊಂಡಿದ್ದರು. ಸಂಗೀತ್, ಮೆಹಂದಿ ಕಾರ್ಯಕ್ರಮದ ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.



