Kollywood

ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್ : ಧುರಂಧರ್ 2 ಸಿನಿಮಾಕ್ಕೆ ರಜನಿಕಾಂತ್ ಫಿದಾ : ಹೀಗಿತ್ತು ಆದಿತ್ಯ ಧರ್ ಪ್ರತಿಕ್ರಿಯೆ

ದೇಶಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿರುವ ಧುರಂಧರ್ 2 ಸಿನಿಮಾದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಸಿನಿಮಾದ ಬಗ್ಗೆ ಬರೆದುಕೊಂಡಿರುವ ರಜನಿಕಾಂತ್ ಅವರು `ಪ್ರತಿಯೊಬ್ಬ ಭಾರತೀಯರು ನೋಡಲೇಬೇಕಾದ ಸಿನಿಮಾ ಇದು’ ಎಂದು ಕೊಂಡಾಡಿದ್ದಾರೆ.

`ಎಂಥ ಅದ್ಭುತ ಸಿನಿಮಾ. ಧುರಂಧರ್2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್! ರಣವೀರ್‌ ಹಾಗೂ ಎಲ್ಲಾ ಕಲಾವಿದರು, ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ ಇದು. ಜೈ ಹಿಂದ್’ ಎಂದು ರಜನಿಕಾಂತ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.


ಸೂಪರ್‌ ಸ್ಟಾರ್ ಅವರಿಂದ ಬಂದ ಮೆಚ್ಚುಗೆಗೆ ನಿರ್ದೇಶಕ ಆದಿತ್ಯ ಧರ್ ಸಂತಸ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಅವರು, ‘ಸರ್, ನಾವೆಲ್ಲರೂ ‘ಮನರಂಜನೆ’ಯನ್ನು ಒಂದೇ ಮಾನದಂಡದಿಂದ ಅಳೆಯುತ್ತಾ ಬೆಳೆದಿದ್ದೇವೆ, ಅದು ನೀವು. ನಮ್ಮನ್ನು ಶಿಳ್ಳೆ ಹೊಡೆಯುವಂತೆ, ನಗುವಂತೆ, ಅಳುವಂತೆ ಹಾಗೂ ಜೀವನಕ್ಕಿಂತ ದೊಡ್ಡದ್ದನ್ನು ಅನುಭವಿಸಲು ಕಲಿಸಿದ್ದೀರಿ ಹಾಗೂ ಈಗಲೂ ನೀವು ಅದೇ ಶುದ್ಧ ಮಾಂತ್ರಿಕತೆಯಿಂದ ಇದನ್ನು ಮಾಡುತ್ತಿದ್ದೀರಿ. ನೀವು ಧುರಂಧರ್ 2 ಅನ್ನು ನೋಡಲೇಬೇಕಾದ ಚಿತ್ರ ಎಂದು ಕರೆದಿರುವುದು ನನ್ನ ಜೀವನದ ಅತಿದೊಡ್ಡ ಸೂಪರ್‌ ಸ್ಟಾರ್ ಕ್ಷಣದಂತೆ ಭಾಸವಾಗುತ್ತಿದೆ. ಇದು ನಮಗೆಲ್ಲರಿಗೂ ದೊಡ್ಡ ಕನಸು ಕಾಣಲು ಕಲಿಸಿದ ವ್ಯಕ್ತಿಯ ಆಶೀರ್ವಾದದಂತೆ ಭಾಸವಾಗುತ್ತಿದೆ. ಪದಗಳಿಗೂ ಮೀರಿದ ಕೃತಜ್ಞತಾ ಭಾವ. ಇದು ನೇರವಾಗಿ ಹೃದಯಕ್ಕೆ ತಲುಪಿದೆ. ಜೈ ಹಿಂದ್’ ಎಂದು ಅವರು ಪೋಸ್ಟ್ ಮಾಡಿದ್ದಾರೆ.


ಮಾರ್ಚ್ 19 ರಂದು ಬಿಡುಗಡೆಯಾಗಿದ್ದ ಧುರಂಧರ್ 2 ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button