Bollywood

ಧುರಂಧರ್ ದಿ ರಿವೆಂಜ್ ಬ್ಯಾನ್ ಮಾಡಲು ಮನವಿ : ಹೈಕೋರ್ಟ್‍ನಲ್ಲಿ ಅರ್ಜಿ ವಜಾ

ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವ ಮೇ 4ರವರೆಗೆ ತಮಿಳುನಾಡಿನಲ್ಲಿ ರಣವೀರ್ ಸಿಂಗ್ ಅಭಿನಯದ ಧುರಂಧರ್ ದಿ ರಿವೆಂಜ್ ಚಿತ್ರವನ್ನು ನಿಷೇಧಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠವು ಈ ಆದೇಶ ಹೊರಡಿಸಿದೆ.

ಈ ಚಿತ್ರವು ರಾಜಕೀಯ ವಿಷಯಗಳ ಸುತ್ತ ಸುತ್ತುವರಿಯುತ್ತದೆ. ಹೀಗಾಗಿ ತಮಿಳುನಾಡಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಸಿನಿಮಾವನ್ನು ನಿಷೇಧಿಸಬೇಕೆಂದು ಅರ್ಜಿದಾರರು ವಾದಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರು, ಅರ್ಜಿದಾರರು ಸಾಮಾನ್ಯ ಆರೋಪವನ್ನು ಮಾತ್ರ ಮಾಡಿದ್ದಾರೆ ಮತ್ತು ಚಿತ್ರದ ಯಾವ ಭಾಗಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ ಎಂದು ಹೇಳಿದ್ದಾರೆ.

 

Show More

Related Articles

Leave a Reply

Your email address will not be published. Required fields are marked *

Back to top button