Hansika Motwani : ಮಾಜಿ ಅತ್ತಿಗೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ `ಬಿಂದಾಸ್’ ಬೆಡಗಿ ಹನ್ಸಿಕಾ ಮೋಟ್ವಾನಿ
ಕನ್ನಡದಲ್ಲಿ `ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ತನ್ನ ಮಾಜಿ ಅತ್ತಿಗೆ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಹೂಡಿದ್ದಾರೆ. ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಹನ್ಸಿಕಾ 2 ಕೋಟಿ ರೂಪಾಯಿ ಪರಿಹಾರ ಕೋರಿದ್ದಾರೆ.
ಹನ್ಸಿಕಾ ಮಾಜಿ ಮಾಜಿ ಅತ್ತಿಗೆ, ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಹನ್ಸಿಕಾ ಮೋಟ್ವಾಣಿ ಹಾಗೂ ಸಹೋದರ ಪ್ರಶಾಂತ್ ಮೋಟ್ವಾನಿ ಅವರ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿದ್ದರು. ಇವರ ವಿರುದ್ಧ ಅರ್ಜಿ ಸಲ್ಲಿಸಿರುವ ಹನ್ಸಿಕಾ, ಮುಸ್ಕಾನ್ ನ್ಯಾನ್ಸಿ ಜೇಮ್ಸ್ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ಆದೇಶ ನೀಡುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅರ್ಜಿ ಪ್ರಕಾರ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರು ಹನ್ಸಿಕಾ ಮೋಟ್ವಾನಿಯ ಸಹೋದರ ಪ್ರಶಾಂತ್ ಮೋಟ್ವಾನಿಯೊಂದಿಗಿನ ವಿವಾಹದ ಸಮಯದಲ್ಲಿ 27 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ಈ ಸಾಲ ಮರುಪಾವತಿಸುವಂತೆ ಪದೇ ಪದೇ ವಿನಂತಿಸಿದರೂ ಅದನ್ನು ಹಿಂದಿರುಗಿಸಲು ವಿಫಲರಾಗಿದ್ದಾರೆ. ಈ ಸಾಲ ಮರುಪಾವತಿಸುವುದನ್ನು ತಪ್ಪಿಸಲು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಸುಳ್ಳು ಹಾಗೂ ಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಶಾಂತ್ ಮೋಟ್ವಾನಿ ಮತ್ತು ಜೇಮ್ಸ್ 2020 ರಲ್ಲಿ ವಿವಾಹವಾಗಿದ್ದರು. ಆದರೆ ನಂತರ ಇವರ ಸಂಬಂಧ ಹದಗೆಟ್ಟಿದ್ದು, 2022ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.



